ಬಡ ಮಹಿಳೆ ಮೇಲೆ ಮನಬಂದಂತೆ ಹಲ್ಲೆ; ಶಾಕಿಂಗ್‌ ವಿಡಿಯೋ ವೈರಲ್

ಮಧ್ಯಪ್ರದೇಶದ ಬಿಂದ್ ಜಿಲ್ಲೆಯ ಗೋಹದ್ ತಹಸಿಲ್‌ನ ಒಬ್ಬ ಕ್ಲರ್ಕ್‌ ಅಧಿಕಾರ ದುರುಪಯೋಗದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವೀಡಿಯೋದಲ್ಲಿ, ಆತ ಒಬ್ಬ ವೃದ್ಧ ಮಹಿಳೆಯೊಂದಿಗೆ ಪೊಲೀಸರ ಸಮ್ಮುಖದಲ್ಲಿ ಜಗಳವಾಡಿ, ಅವಳ ಮೇಲೆ ಶೂ ನಿಂದ ಹಲ್ಲೆ ನಡೆಸಿದ್ದಾನೆ. ಮಹಿಳೆಯನ್ನು ರಕ್ಷಿಸಲು ಬಂದ ಅವಳ ಪತಿಯನ್ನೂ ಕೂಡ ಹೊಡೆದಿದ್ದಾನೆ.

ಆತನ ಹೊಡೆತದಿಂದ ಮಹಿಳೆ ಪ್ರಜ್ಞಾಹೀನಳಾಗಿ ನೆಲಕ್ಕೆ ಬಿದ್ದಿದ್ದು, ಬಳಿಕ ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯಲ್ಲಿ ಅತ್ಯಂತ ಆಘಾತಕಾರಿ ವಿಷಯವೆಂದರೆ, ಪೊಲೀಸರು ಈ ಮಹಿಳೆಯ ಹೇಳಿಕೆ ದಾಖಲಿಸಿಕೊಳ್ಳಲು ಮುಂದಾಗಿಲ್ಲ. ಪ್ರಸ್ತುತ, ಸ್ಥಳೀಯ ಆಡಳಿತವು ಆ ಕ್ಲರ್ಕ್‌ ನನ್ನು ಅಮಾನತುಗೊಳಿಸಿದೆ.

ಘಟನೆಯ ವಿವರ:

ಗೋಹದ್‌ನ ಅಂದೋರಿ ಪ್ರದೇಶದ ಪಾಲಿ ಗ್ರಾಮದ ವೃದ್ಧ ಮಹಿಳೆ ದೀಪಾ ಜಾಟವ್, ತನ್ನ ಆಸ್ತಿಯನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿಸಲು ಗೋಹದ್ ತಹಸಿಲ್ ಕಚೇರಿಗೆ ಬಂದಿದ್ದರು. ತಹಸೀಲ್ದಾರ್ ರಾಕೇಶ್ ಶ್ರೀವಾಸ್ತವ್‌ರ ಕಚೇರಿಯಲ್ಲಿ ನಿಯೋಜಿತನಾಗಿದ್ದ ಬಾಬು ನವಲಕಿಶೋರ್ ಗೌರ್ ಈ ಕೆಲಸ ಮಾಡಲು 10 ಸಾವಿರ ರೂಪಾಯಿ ಲಂಚ ಕೇಳಿದ್ದು, ಆ ಬಡ ಮಹಿಳೆ ಬಾಬುವಿನ ಮಾತನ್ನು ಒಪ್ಪಿಕೊಂಡು 10 ಸಾವಿರ ರೂಪಾಯಿ ಲಂಚ ನೀಡಿದ್ದರು.

ಆದರೂ, ಅವರ ಆಸ್ತಿಯನ್ನು ಆನ್‌ಲೈನ್‌ನಲ್ಲಿ ನೋಂದಾಯಿಸಲಾಗಿರಲಿಲ್ಲ. ಇದರಿಂದ ಕೋಪಗೊಂಡ ದೀಪಾ ಜಾಟವ್ ತನ್ನ ಪತಿ ರಾಮ ಅವತಾರ್ ಜಾಟವ್ ಜೊತೆ ಸೋಮವಾರ ಮಧ್ಯಾಹ್ನ ಗೋಹದ್ ತಹಸೀಲ್ದಾರ್ ಕಚೇರಿಗೆ ಬಂದಿದ್ದು, ಲಂಚ ತೆಗೆದುಕೊಂಡರೂ ಕೆಲಸ ಮಾಡದ ಬಾಬು ನವಲಕಿಶೋರ್ ಗೌರ್ ಜೊತೆ ಜಗಳವಾಡಿದ್ದಾರೆ.

ವಿವಾದ ವಿಕೋಪಕ್ಕೆ ಹೋದಂತೆ, ನವಲಕಿಶೋರ್ ಗೌರ್ ಮಹಿಳೆಯನ್ನು ನಿಂದಿಸಿ, ಅವಳ ಮುಖಕ್ಕೆ ಹೊಡೆದಿದ್ದಾನೆ. ಅಷ್ಟೇ ಅಲ್ಲ, ತನ್ನ ಶೂ ನಿಂದ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಮಹಿಳೆ ಕಿರುಚುತ್ತಿದ್ದರೂ ಆರೋಪಿ ಬಾಬು ನಿರ್ದಯವಾಗಿ ಹೊಡೆಯುತ್ತಲೇ ಇದ್ದ. ಘಟನೆಯಲ್ಲಿ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಮಾಹಿತಿ ದೊರೆತ ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ವೈದ್ಯರ ಪ್ರಕಾರ, ಮಹಿಳೆಗೆ ಗಂಭೀರ ಗಾಯಗಳಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಗೋಹದ್ ಪೊಲೀಸ್ ಠಾಣೆಯಲ್ಲಿ ಬಲಿಪಶು ಮಹಿಳೆಯ ದೂರಿನ ಮೇಲೆ ಆರೋಪಿ ಬಾಬುವಿನ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಬಲಿಪಶು ಮಹಿಳೆ ಪೊಲೀಸರು ತನ್ನ ಹೇಳಿಕೆ ದಾಖಲಿಸಿಕೊಂಡಿಲ್ಲ ಎಂದು ಆರೋಪಿಸಿದ್ದಾರೆ. ಪ್ರಸ್ತುತ, ಗೋಹದ್ ಉಪ ವಿಭಾಗೀಯ ಅಧಿಕಾರಿ ಪರಾಗ್ ಜೈನ್, ನವಲಕಿಶೋರ್ ಗೌರ್ ಅವರನ್ನು ಅಮಾನತುಗೊಳಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read