ಪಕ್ಷೇತರರಾಗಿ ಸ್ಪರ್ಧಿಸುವೆ ಎಂಬ ಬ್ಲಾಕ್ ಮೇಲ್ ನನ್ನ ಹತ್ರ ನಡೆಯಲ್ಲ: ಭವಾನಿ ರೇವಣ್ಣಗೆ HDK ಪರೋಕ್ಷ ಟಾಂಗ್

ಬೆಂಗಳೂರು: ಹಾಸನ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಟಿಕೆಟ್ ಗೆ ಪೈಪೋಟಿ ನಡೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಪಕ್ಷೇತರವಾಗಿ ಸ್ಪರ್ಧಿಸುತ್ತೇನೆ ಎನ್ನುವ ಬ್ಲಾಕ್ಮೇಲ್ ನನ್ನ ಹತ್ತಿರ ನಡೆಯುವುದಿಲ್ಲ ಎಂದು ಭವಾನಿ ರೇವಣ್ಣ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

ಪಕ್ಷೇತರವಾಗಿ ಸ್ಪರ್ಧೆ ಮಾಡುತ್ತೇನೆ ಎಂದು ದೇವೇಗೌಡರ ಬಳಿ ಬ್ಲಾಕ್ ಮೇಲ್ ಮಾಡಬಹುದು. ದೇವೇಗೌಡರಿಗೆ ಎಮೋಷನಲ್ ಬ್ಲಾಕ್ ಮೇಲ್ ಮಾಡಬಹುದು. ಆದರೆ, ನನ್ನ ಬಳಿ ಬ್ಲಾಕ್ ಮೇಲ್ ನಡೆಯುವುದಿಲ್ಲ ಎಂದು ತಿಳಿಸಿದ್ದಾರೆ.

ಒಬ್ಬ ಕಾರ್ಯಕರ್ತನೇ ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗುತ್ತಾರೆ. ಕಾರ್ಯಕರ್ತನಿಗೆ ಟಿಕೆಟ್ ಎಂದು ನಾನು ನಿರಂತರವಾಗಿ ಹೇಳಿದ್ದೇನೆ. ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಯಾರು ಸಮರ್ಥವಾಗಿದ್ದಾರೆ ಎಂದು ನನಗೂ ಗೊತ್ತು ನಿಮಗೂ ಗೊತ್ತು. ಸದ್ಯದಲ್ಲೇ ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಘೋಷಣೆ ಆಗಲಿದೆ. ನನ್ನ ಪಕ್ಷದ ಜವಾಬ್ದಾರಿ ಬಳಿಕ ನನಗೆ ಕಾರ್ಯಕರ್ತ ಮುಖ್ಯ. ಯಾವುದೇ ಬ್ಲಾಕ್ ಮೇಲ್ ಗೆ ಹಿಂದೆ ಸರಿಯುವುದಿಲ್ಲ. ನನಗೆ ಪಕ್ಷವೇ ಮುಖ್ಯ ಎಂದು ಬೆಂಗಳೂರಿನಲ್ಲಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read