BIG NEWS: ಕಾಂಗ್ರೆಸ್ ವಿರುದ್ಧ ಸದನದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ರೋಷಾವೇಷ

ಬೆಂಗಳೂರು: ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ಜಗದೀಶ್ ಆತ್ಮಹತ್ಯೆಗೆ ಯತ್ನ ಪ್ರಕರಣದ ವಿಚಾರವಾಗಿ ವಿಧನಸಭೆಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಸಚಿವ ಚಲುವರಾಯಸ್ವಾಮಿ ನಡುವೆ ವಾಗ್ವಾದ ತಾರಕಕ್ಕೇರಿದ್ದು, ಕಾಂಗ್ರೆಸ್ ಪಕ್ಷದ ವಿರುದ್ಧ ಕುಮಾರಸ್ವಾಮಿ ರೋಷಾವೇಷ ವ್ಯಕ್ತಪಡಿಸಿದ್ದಾರೆ.

ಬಸ್ ಚಾಲಕ ಜಗದೀಶ್ ಕುಟುಂಬದ ಜೊತೆ ನಾನು ಏನು ಮಾತನಾಡಿದ್ದೇನೆ. ವೈದ್ಯರ ಜೊತೆ ಏನು ಮಾತನಾಡಿದ್ದೇನೆ ಎಂಬ ಬಗ್ಗೆ ವಾಯ್ಸ್ ರೆಕಾರ್ಡ್ ಇದೆ. ನಾನು ಲಕ್ಷಾಂತರ ಬಡ ಕುಟುಂಬಗಳ ಜೀವ ಉಳಿಸಿದವನು ಇವರ ರೀತಿ ಕೊಲೆಗೆಡುಕನಲ್ಲ. ಪ್ರಕರಣದ ತನಿಖೆಯಾಗುವವರೆಗೆ ಸಚಿವರು ರಾಜಿನಾಮೆ ಕೊಟ್ಟು ಹೊರಗಿರಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೆಚ್.ಡಿ.ಕೆ ಕೊಲೆಗೆಡುಕ ಪದಕ್ಕೆ ಶಾಸಕ ಹೆಚ್.ಸಿ.ಬಾಲಕೃಷ್ಣ ತೀವ್ರ ವಿರೋಧ ವ್ಯಕ್ತಪಡಿಸಿದರು. ಇದೇ ವೇಳೆ ನಮ್ಮ ಹಂಗಿನಲ್ಲಿ ಸಿಎಂ ಆದವರು ಎಂದು ಚಲುವರಾಯಸ್ವಾಮಿ ಹೇಳುತ್ತಿದ್ದಂತೆ ಇನ್ನಷ್ಟು ಕೆರಳಿ ಕೆಂಡವಾದ ಮಾಜಿ ಸಿಎಂ ಕುಮಾರಸ್ವಾಮಿ, ನಾನು, ದೇವೇಗೌಡರು ಕಾಂಗ್ರೆಸ್ ನಿಂದ ಸಿಎಂ ಆಗಿಲ್ಲ. ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡ ಎಂಬ ಕಾರಣಕ್ಕೆ ಸಚಿವರಾಗಿದ್ದ ಈಶ್ವರಪ್ಪನವರಿಂದ ಕಿತ್ತೋದ್ ಕಾಂಗ್ರೆಸ್ಸಿಗರು ರಾಜಿನಾಮೆ ಕೊಡಿಸಿದರು. ನನ್ನ ಬಗ್ಗೆ ಮಾತನಾಡಲು ಕಾಂಗ್ರೆಸ್ ನವರಿಗೆ ಯಾವ ನೈತಿಕತೆ ಇದೆ ಎಂದು ರೋಷಾವೇಷ ವ್ಯಕ್ತಪಡಿಸಿದರು.

ಹೆಚ್.ಡಿ.ಕೆ ಮಾತಿಗೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಇದೇ ವೇಳೆ ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ಮತ್ತೆ ಗಲಾಟೆ-ಗದ್ದಲ ಆರಂಭವಾಯಿತು. ಕೆ.ಎಸ್.ಆರ್.ಟಿಸಿ ಬಸ್ ಚಾಲಕನ ಆತ್ಮಹತ್ಯೆ ಯತ್ನ ಪ್ರಕರಣ ರಾಜಕೀಯ ತಿರುಪಡೆದಿದ್ದು, ವಿಧಾನಸಭೆ ಕಲಾಪ ರಾಜಕೀಯ ನಾಯಕರ ಕಾದಾಟಕ್ಕೆ ವೇದಿಕೆಯಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read