ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರದ ವೇಳೆ ಕಣ್ಣೀರಿಟ್ಟ ದೇವೇಗೌಡರು

ರಾಮನಗರ: ಈ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತಂದು ಕಣ್ಣುಮುಚ್ಚುವ ಆಸೆ ನನ್ನದು ಎಂದು ಹೇಳಿದ ದೇವೇಗೌಡರು ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.

ರಾಮನಗರ ತಾಲೂಕಿನ ಸುಗ್ಗನಹಳ್ಳಿ, ಕೈಲಾಂಚ ಗ್ರಾಮದಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರವಾಗಿ ಪ್ರಚಾರ ನಡೆಸಿದ ದೇವೇಗೌಡರು ಈ ವೇಳೆ ಭಾವುಕರಾಗಿದ್ದಾರೆ. ಈ ಹಿಂದೆ ನಿಖಿಲ್ ಕುಮಾರಸ್ವಾಮಿಯನ್ನು ಮಂಡ್ಯಕ್ಕೆ ಕರೆದುಕೊಂಡು ಹೋಗಿ ವಂಚನೆ ಮಾಡಿ ಸೋಲಿಸಿದರು. ಈಗ ನಿಮ್ಮ ಮನೆ ಬಾಗಿಲಿಗೆ ಬಂದು ನಿಂತಿದ್ದಾನೆ. ನಾನು ಇಳಿ ವಯಸ್ಸಿನಲ್ಲಿ ಮತಯಾಚಿಸಲು ಬಂದಿದ್ದೇನೆ. ನಿಮ್ಮ ಮುಂದೆ ಕೈಚಾಚಿ ಮತಯಾಚಿಸುತ್ತಿದ್ದು, ದಯವಿಟ್ಟು ನಿಖಿಲ್ ಕುಮಾರಸ್ವಾಮಿಯನ್ನು ಗೆಲ್ಲಿಸಿ ಎಂದು ಮನವಿ ಮಾಡಿದ್ದಾರೆ.

ನನ್ನ ಮಗ ಕುಮಾರಸ್ವಾಮಿ ಎರಡು ಗಂಭೀರ ಆಪರೇಷನ್ ಆಗಿದ್ದರೂ ಕೂಡ ರಾಜ್ಯದ ಜನರಿಗಾಗಿ ರಾಜ್ಯವನ್ನು ಸುತ್ತುತ್ತಿದ್ದಾರೆ. ನಮ್ಮ ಕುಟುಂಬ ನಾಡಿನ ರೈತರ ಹಿತಕ್ಕಾಗಿ ಹೋರಾಡುತ್ತಿದೆ. ಇದನ್ನು ಅರಿತು ಈ ಚುನಾವಣೆಯಲ್ಲಿ ಮತ ನೀಡಿ ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read