ಸಾಬೂದಾನಿ ಅಥವಾ ಸೀಮೆಅಕ್ಕಿಯಿಂದ ಹಲವಾರು ಬಗೆಯ ರುಚಿಕರ ತಿನಿಸುಗಳನ್ನು ಮಾಡಬಹುದು. ಹಾಗೇ ಬಿಸಿ ಬಿಸಿ ಕಾಫಿ ಟೀ ಜೊತೆ ಸವಿಯಲು ಸೀಮೆಅಕ್ಕಿ ಪಕೋಡ ರುಚಿ ಕೂಡ ಸವಿಯಬಹುದು. ಇಲ್ಲಿದೆ ಸಾಬೂದಾನಿ ಪಕೋಡ ಮಾಡುವ ವಿವರ.
ಬೇಕಾಗುವ ಸಾಮಾಗ್ರಿಗಳು
ಸೀಮೆಅಕ್ಕಿ – 1 ಕಪ್
ಕಡಲೆ ಹಿಟ್ಟು – 4 ಚಮಚ
ಅಕ್ಕಿಹಿಟ್ಟು – 1 ಚಮಚ
ಖಾರದ ಪುಡಿ – 2 ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಇಂಗು ಚಿಟಿಕೆಯಷ್ಟು
ಕರಿಬೇವು – 1 ಕಡ್ಡಿ
ಎಣ್ಣೆ ಕರಿಯಲು
ಮಾಡುವ ವಿಧಾನ
ಸೀಮೆಕ್ಕಿಯನ್ನು ಎರಡು ಗಂಟೆಗಳ ಕಾಲ ನೆನೆಸಿ ನೀರು ಬಸಿದುಕೊಳ್ಳಿ. ಅದಕ್ಕೆ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಖಾರ ಪುಡಿ, ಉಪ್ಪು, ಇಂಗು, ಕತ್ತರಿಸಿದ ಕರಿ ಬೇವು ಹಾಕಿ ಕಲಸಿ. ಉಂಡೆ ಕಟ್ಟುವಷ್ಟು ಗಟ್ಟಿಯಾಗಿ ನೀರು ಬೆರೆಸಿ ಕಲಸಿಟ್ಟುಕೊಳ್ಳಿ.
ನಂತರ ಸಣ್ಣ ಸಣ್ಣ ಉಂಡೆಗಳನ್ನು ಮಾಡಿಕೊಂಡು ಅದನ್ನು ಕೈಯಲ್ಲಿ ಸ್ವಲ್ಪ ತಟ್ಟಿ. ಬಾಣಲೆಗೆ 1 ಕಪ್ ಎಣ್ಣೆ ಹಾಕಿ ಎಣ್ಣೆ ಕುದಿ ಬರುವಾಗ ತಟ್ಟಿದ ಉಂಡೆಗಳನ್ನು ಬಿಡಿ. ಅದರ ಎರಡೂ ಬದಿ ಸ್ವಲ್ಪ ಕಂದು ಬಣ್ಣಕ್ಕೆ ಬರುವಾಗ ತೆಗೆಯಿರಿ. ರೆಡಿಯಾದ ಪಕೋಡವನ್ನು ಖಾರ ಚಟ್ನಿಯೊಂದಿಗೆ ಸವಿಯಲು ಚೆನ್ನಾಗಿರುತ್ತದೆ