ʼಜೀನ್ಸ್ʼ ಜೇಬಿನ ಮೇಲಿನ ಸಣ್ಣ ಬಟನ್ ನೋಡಿದ್ದೀರಾ…….? ಇದರ ಹಿಂದಿದೆ ಈ ಕಾರಣ

 

ಪ್ರಸ್ತುತ ಜೀನ್ಸ್ ನಮ್ಮೆಲ್ಲರ ಅಚ್ಚುಮೆಚ್ಚಿನ ಡ್ರೆಸ್ ಗಳಲ್ಲಿ ಒಂದಾಗಿದೆ. ಇದು ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟು ಹಲವು ವರ್ಷಗಳಾಗಿದ್ದರೂ ನಂಬರ್ ಒನ್ ಸ್ಥಾನದಲ್ಲಿದೆ.

ಸಾಮಾನ್ಯವಾಗಿ ಎಲ್ಲರೂ ಜೀನ್ಸ್ ಧರಿಸುತ್ತಾರೆ. ಆದ್ರೆ ಯಾಕೆ ಪ್ಯಾಂಟ್ ನ ಜೇಬಿಗೆ ಸಣ್ಣ ಬಟನ್ ಇದೆ ಎಂಬುದು ಮಾತ್ರ ಅನೇಕರಿಗೆ ತಿಳಿದಿಲ್ಲ.

ಜೀನ್ಸ್ ಜೇಬಿನ ಹತ್ತಿರ ಸಣ್ಣ ಬಟನ್ ಫ್ಯಾಷನ್ ಗಾಗಿ ಇಟ್ಟಿದ್ದಲ್ಲ. ಇದಕ್ಕೊಂದು ಇತಿಹಾಸವಿದೆ. ಅಮೆರಿಕಾದಲ್ಲಿ ಅನೇಕ ವರ್ಷಗಳ ಹಿಂದೆ ಜೀನ್ಸ್ ಜಾರಿಗೆ ಬಂತು. ಕಾರ್ಖಾನೆ, ಫ್ಯಾಕ್ಟರಿಗೆ ಹೋಗುವವರು ಜೀನ್ಸ್ ಧರಿಸ್ತಾ ಇದ್ದರು. ಆದ್ರೆ ಅವರ ಕೆಲಸದಿಂದಾಗಿ ಜೀನ್ಸ್ ಪ್ಯಾಂಟ್ ನ ಜೇಬು ಪದೇ ಪದೇ ಕಿತ್ತು ಹೋಗ್ತಾ ಇತ್ತು.

ಇದಕ್ಕೆ ಪರಿಹಾರ ನೀಡುವ ನಿಟ್ಟಿನಲ್ಲಿ ಸಣ್ಣ ಬಟನ್ ಇಡಲಾಯ್ತು. ಇದನ್ನು ಮೊದಲ ಬಾರಿ ಜಾಕೋಬ್ ಡೇವಿಸ್ ಎಂಬುವವರು ಅನ್ವೇಷಣೆ ಮಾಡಿದ್ರು. ಮೂರು ಚಿಕ್ಕ ಬಟನ್ ಹಾಕಿದ್ರೆ ಜೇಬು ಸುರಕ್ಷಿತ ಎಂಬುದನ್ನು ಅರಿತು. ನಂತ್ರ ಈ ಸಣ್ಣ ಬಟನ್ ಫೇಮಸ್ ಆಯ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read