ಕೋವಲಂ ಕಡಲ ಕಿನಾರೆಯ ಕಂಡಿರಾ….?

ಕೋವಲಂ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಬೀಚ್ ಆಗಿದ್ದು, ಇಲ್ಲಿ ಮೂರು ಅರ್ಧ ಚಂದ್ರಾಕೃತಿಯ ಬೀಚ್‌ಗಳ ಸಮಾಗಮವಿದೆ.

ಬೀಚ್ ಮೇಲೆ ಅತ್ಯಂತ ಸುಂದರವಾಗಿ ನಿರ್ಮಾಣಗೊಂಡಿರುವ ವಿಶಾಲವಾದ ಕಲ್ಲಿನ ಭೂಶಿರವು ಸಮುದ್ರ ಸ್ನಾನಕ್ಕೆ ಅನುಕೂಲಕರವಾಗುವಂತೆ ತಣ್ಣೀರಿನ ಸುಂದರ ಕೊಲ್ಲಿಯೊಂದನ್ನು ರೂಪುಗೊಳಿಸಿದೆ.

ಸೂರ್ಯ ಸ್ನಾನ, ಈಜು, ಶರೀರದ ಧಾರ್ಡ್ಯವನ್ನುಹೆಚ್ಚಿಸುವ ಮೂಲಿಕಾ ಮಸಾಜ್ ಗಳು, ಕಡಲ ತೀರದಲ್ಲಿ ನಡೆಯುವ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಮನರಂಜನೆಯ ಮಹಾಪೂರವನ್ನೇ ಹರಿಸುತ್ತದೆ.

ಇಲ್ಲಿನ ಸೂರ್ಯಾಸ್ತದ ಸೊಬಗನ್ನು ಕಣ್ತುಂಬಿಕೊಳ್ಳಲೆಂದೇ ಪ್ರವಾಸಿಗರು ಆಗಮಿಸುತ್ತಾರೆ. ಕಡಲತಡಿಯಲ್ಲಿ ಕಡಿಮೆ ದರದ ಕುಟೀರಗಳು, ಆಯುರ್ವೇದದ ಆರೋಗ್ಯ ಧಾಮಗಳು, ವ್ಯಾಪಾರ ವಿಹಾರದ ವಲಯಗಳು, ಈಜುಕೊಳಗಳು, ಯೋಗ ಮತ್ತು ಮಸಾಜು ಕೇಂದ್ರಗಳಿವೆ.

ಕೇರಳದ ರಾಜಧಾನಿಯಾದ ತಿರುವನಂತಪುರವು ಕೋವಲಂನಿಂದ ಕೇವಲ 16 ಕಿಲೋಮೀಟರುಗಳಷ್ಟು ದೂರದಲ್ಲಿದೆ. ರಜೆಯ ಪ್ರವಾಸಕ್ಕೆ ಬಂದಾಗ ಕೋವಲಂನಲ್ಲೇ ಉಳಿದುಕೊಂಡು ನಗರಕ್ಕೆ ಭೇಟಿ ಕೊಡುವುದು ಒಳ್ಳೆಯದು.

ತಿರುವನಂತಪುರಮ್ ನಗರದಲ್ಲಿ ಹಲವು ಆಸಕ್ತ ಪ್ರದೇಶಗಳಿವೆ. ಅವುಗಳಲ್ಲಿ ನೇಪಿಯರ್ ಮ್ಯೂಸಿಯಂ, ಶ್ರೀ ಚಿತ್ರ ಆರ್ಟ್ ಗ್ಯಾಲರಿ ಮತ್ತು ಪದ್ಮನಾಭಸ್ವಾಮಿ ದೇವಸ್ಥಾನ ಮೊದಲಾದವು ಪ್ರಮುಖವಾದವು.

ಪ್ರವಾಸಿಗರಿಗೆ ವಾಸ್ತವ್ಯಕ್ಕೆ ಇಲ್ಲಿ ಎಲ್ಲಾ ವ್ಯವಸ್ಥೆಗಳಿವೆ. ಪಂಚತಾರ ಹೋಟೆಲ್‌ ಗಳಿಂದ ಹಿಡಿದು ಬಜೆಟ್ ಹೋಟೆಲ್ ವರೆಗಿನ ಸೌಲಭ್ಯ ಇಲ್ಲಿ ದೊರೆಯುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read