ಮಡಿಕೇರಿ : ಅಪಘಾತ ಮಾಡಿದ್ದ ವ್ಯಕ್ತಿಯೋರ್ವರಿಗೆ ಪಾಪಪ್ರಜ್ಞೆ ಕಾಡಿದ್ದು, ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಡಿಕೇರಿಯಲ್ಲಿ ನಡೆದಿದೆ.
ಅಪಘಾತದಲ್ಲಿ ಯುವಕನ ಜೀವನ ಹಾಳು ಮಾಡಿದೆ ಎಂದು ಮನನೊಂದ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಹೇರವನಾಡಿನಲ್ಲಿ ನಡೆದಿದೆ.
ಅಪಘಾತ ಮಾಡಿದ್ದ ವ್ಯಕ್ತಿ ಯುವಕನ ಜೀವನ ಹಾಳು ಮಾಡಿದೆ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಮೃತರನ್ನು ತಮ್ಮಯ್ಯ (57) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡಿದ್ದ ಯುವಕ ಧನಲ್ ಕೂಡ ಇದೀಗ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.
ಫೆಬ್ರವರಿ 9ರಂದು ಮಡಿಕೇರಿಯ ಬಳಿಯ ಚೈನ್ ಗೇಟ್ ಬಳಿ ಅಪಘಾತ ನಡೆದಿತ್ತು. ಬೈಕಿನಲ್ಲಿ ಬರುತ್ತಿದ್ದ ಧನಲ್ ಗೆ ಮತ್ತೊಂದು ಬೈಕನಲ್ಲಿ ಬರುತ್ತಿದ್ದ ತಮ್ಮಯ್ಯ ಡಿಕ್ಕಿ ಹೊಡೆದಿದ್ದರು. ಪರಿಣಾಮ ಕೆಳಗೆ ಬಿದ್ದ ಧನಲ್ ಮೇಲೆ ಹಿಂದಿನಿಂದ ಬಂದ ಲಾರಿ ಹರಿದಿತ್ತು. ಗಂಭೀರವಾಗಿ ಗಾಯಗೊಂಡ ಧನಲ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನನ್ನಿಂದಲೇ ಹೀಗಾಯ್ತಲ್ಲ ಎಂದು ತಮ್ಮಯ್ಯ ನೊಂದಿದ್ದರು. ಈ ಹಿನ್ನೆಲೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಕಾಕತಾಳೀಯವೆಂಬಂತೆ ಅಪಘಾತದಲ್ಲಿ ಗಾಯಗೊಂಡಿದ್ದ ಯುವಕ ಧನಲ್ ಕೂಡ ಇದೀಗ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.