ಬೆಳ್ತಂಗಡಿ : ಸಾಮಾಜಿಕ ಹೋರಾಟಗಾರ ವಸಂತ್ ಗಿಳಿಯಾರ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಹಿಂದೂ ಕ್ರೈಸ್ತರ ನಡುವೆ ದ್ವೇಷದ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಶೇಖರ ಲಾಯಿಲ್ ನೀಡಿದ ದೂರಿನ ಮೇರೆಗೆ ವಸಂತ್ ಗಿಳಿಯಾರ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆಸಿದ ಧರ್ಮ ಸಂರಕ್ಷಣಾ ಸಭೆಯಲ್ಲಿ ಮಾತನಾಡಿದ್ದ ವಸಂತ್ ಗಿಳಿಯಾರ್, ಮಿಶನರಿಗಳ ಪ್ರಭಾವದಿಂದ ಹಿಂದುಗಳ ತುಳಸಿ ಕಟ್ಟೆ ಒಡೆಯಲಾಗಿದೆ. ಬಳಿಕ ಆ ಸ್ಥಳದಲ್ಲಿ ಶಿಲುಬೆ ಇರಿಸಲಾಗಿದೆ. 1983 ರಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಪ್ರಾರಂಭವಾದ ನಂತರ ಈ ಕೃತ್ಯ ನಿಂತಿದೆ ಎಂದು ಹೇಳಿದ್ದರು.
ಶೇಖರ ಲಾಯಿಲ್ ನೀಡಿದ ದೂರಿನ ಮೇರೆಗೆ ವಸಂತ್ ಗಿಳಿಯಾರ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.