ಪಣಜಿ: ವಿದ್ಯಾರ್ಥಿಯೊಬ್ಬ ಹಾಸ್ಟೆಲ್ ರೂಂ ನಲ್ಲಿಯೇ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಗೋವಾದ ಬಿಐಟಿಎಸ್ ಪಿಲಾನಿ ಕ್ಯಾಂಪಸ್ ನಲ್ಲಿ ನಡೆದಿದೆ.
20 ವರ್ಷದ ರಿಷಿ ನಾಯರ್ ಮೃತ ವಿದ್ಯಾರ್ಥಿ. ಪೋಷಕರು ರಿಷಿಗೆ ಕರೆ ಮಾಡಿದಾಗ ಆತ ಫೋನ್ ರಿಸೀವ್ ಮಾಡುತ್ತಿರಲಿಲ್ಲ. ಇದರಿಂದ ಆತಂಕಗೊಂಡ ಪೋಷಕರು ಹಾಸ್ಟೆಲ್ ಸಿಬ್ಬಂದಿಗೆ ಕರೆ ಮಾಡಿ ಪರಿಶೀಲಿಸಲು ಹೇಳಿದ್ದಾರೆ. ಈ ವೇಳೆ ಹಾಸ್ಟೆಲ್ ಸಿಬ್ಬಂದಿ ರೂಮಿನ ಬಾಗಿಲು ತೆರೆದು ನೋಡಿದಾಗ ರಿಷಿ ಹಾಸಿಗೆ ಮೇಲೆಯೇ ಮಲಗಿದ್ದ ರೀತಿಯಲ್ಲಿ ಶವ್ವಾಅಗಿ ಪತ್ತೆಯಾಗಿದ್ದಾನೆ.
ರಿಷಿ ಮೊದಲು ಹೈದರಾಬಾದ್ ನಲ್ಲಿ ಬಿಐಟಿಎಸ್ ಪಿಲಾನಿ ಕ್ಯಂಪಸ್ ನಲ್ಲಿ ಓದುತ್ತಿದ್ದ. ಎರಡುವರೆ ತಿಂಗಳ ಹಿಂದೆ ರಿಷಿ ಪ್ರೀತಿಸುತ್ತಿದ್ದ ಯುವತಿ ಹೈದರಾಬಾದ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಳು. ಈ ಘಟನೆಯಿಂದ ರಿಷಿ ಮಾನಸಿಕವಾಗಿ ನೊಂದಿದ್ದ. ಬಳಿಕ ಗೋವಾದ ಬಿಐಟಿಎಸ್ ಪಿಲಾನಿ ಕ್ಯಾಂಪಸ್ ಗೆ ಶಿಫ್ಟ್ ಆಗಿದ್ದ. ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದ ರಿಷಿ ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಗೋವಾ ಕ್ಯಾಂಪಸ್ ನಲ್ಲಿ ಕಳೆದ ಒಂದು ವರ್ಷದಲ್ಲಿ ಐವರು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಣ್ದು ವರದಿಯಾಗಿದೆ,