ELIMINATED: ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಉತ್ತರಾಧಿಕಾರಿ ಹಶೆಮ್ ಸಫೀದ್ದೀನ್ ಹತ್ಯೆ: ಇಸ್ರೇಲ್ ಮಾಹಿತಿ

ಜೆರುಸಲೇಂ: ಇರಾನ್ ಬೆಂಬಲಿತ ಲೆಬನಾನಿನ ಉಗ್ರಗಾಮಿ ಗುಂಪನ್ನು ಗುರಿಯಾಗಿಸಿಕೊಂಡು ಇಸ್ರೇಲಿ ನಡೆಸಿದ ದಾಳಿಯಲ್ಲಿ ಕಳೆದ ತಿಂಗಳು ಮೃತಪಟ್ಟಿದ್ದ ದಿವಂಗತ ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಅವರ ಉತ್ತರಾಧಿಕಾರಿ ಹಶೆಮ್ ಸಫೀದ್ದೀನ್ ಅವರನ್ನು ಕೊಂದಿರುವುದಾಗಿ ಇಸ್ರೇಲ್ ರಕ್ಷಣಾ ಪಡೆಗಳು ಬುಧವಾರ ದೃಢಪಡಿಸಿವೆ.

ಹೆಜ್ಬೊಲ್ಲಾಹ್ ಎಕ್ಸಿಕ್ಯುಟಿವ್ ಕೌನ್ಸಿಲ್ ನ ಮುಖ್ಯಸ್ಥ ಹಶೆಮ್ ಸಫೀದ್ದೀನ್ ಮತ್ತು ಹಿಜ್ಬುಲ್ಲಾದ ಗುಪ್ತಚರ ಪ್ರಧಾನ ಕಚೇರಿಯ ಕಮಾಂಡರ್ ಅಲಿ ಹುಸೇನ್ ಹಜಿಮಾ ಅವರು 3 ವಾರಗಳ ಹಿಂದೆ ದಹೀಹ್ ನಲ್ಲಿರುವ ಹೆಜ್ಬುಲ್ಲಾದ ಮುಖ್ಯ ಗುಪ್ತಚರ ಹೆಚ್.ಕ್ಯೂ.ನಲ್ಲಿ ದಾಳಿ ಸಮಯದಲ್ಲಿ ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಡಿಫೆನ್ಸ್ ಫೋರ್ಸ್ ಪೋಸ್ಟ್ ನಲ್ಲಿ ದೃಢಪಡಿಸಿದೆ.

ಹಶೆಮ್ ಸಫೀದಿನ್ ಯಾರು?

ನಸ್ರಲ್ಲಾ ಅವರ ಸಂಬಂಧಿ, ಸಫೀದ್ದೀನ್ ನನ್ನು ಹಿಜ್ಬುಲ್ಲಾ ಜಿಹಾದ್ ಕೌನ್ಸಿಲ್‌ಗೆ ನೇಮಿಸಲಾಯಿತು. ಅದರ ಮಿಲಿಟರಿ ಕಾರ್ಯಾಚರಣೆಗಳಿಗೆ ಜವಾಬ್ದಾರರಾಗಿರುವ ಕಾರ್ಯಕಾರಿ ಮಂಡಳಿಯು ಹಿಜ್ಬುಲ್ಲಾದ ಆರ್ಥಿಕ ಮತ್ತು ಆಡಳಿತಾತ್ಮಕ ವ್ಯವಹಾರಗಳನ್ನು ನೋಡಿಕೊಳ್ಳುತ್ತದೆ. ಇಸ್ರೇಲ್‌ನೊಂದಿಗಿನ ಹಗೆತನದ ಕೊನೆಯ ವರ್ಷದಲ್ಲಿ ಹಿಜ್ಬುಲ್ಲಾ ಪರವಾಗಿ ಮಾತನಾಡುವ ಪ್ರಮುಖ ಪಾತ್ರವನ್ನು ಸಫೀದಿನ್ ವಹಿಸಿಕೊಂಡರು.

ಸಫೀದ್ದೀನ್ ಹಿಜ್ಬುಲ್ಲಾದ ಅತ್ಯಂತ ಹಿರಿಯ ಮಿಲಿಟರಿ-ರಾಜಕೀಯ ವೇದಿಕೆ ಶುರಾ ಕೌನ್ಸಿಲ್‌ನ ಸದಸ್ಯರಾಗಿದ್ದರು, ಭಯೋತ್ಪಾದಕ ಸಂಘಟನೆಯಲ್ಲಿ ನೀತಿ-ನಿರ್ಧಾರದ ಜವಾಬ್ದಾರಿ ಹೊಂದಿದ್ದ ಎಂದು ಇಸ್ರೇಲಿ ಮಿಲಿಟರಿ ತಿಳಿಸಿದೆ.

ಸಫಿಯದ್ದೀನ್‌ನನ್ನು ಕೊಂದಿದ್ದೇನೆ ಎಂಬ ಇಸ್ರೇಲ್ ಹೇಳಿಕೆಗೆ ಹಿಜ್ಬುಲ್ಲಾದಿಂದ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ.

https://twitter.com/IDF/status/1848827621510947040

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read