ಅಪರೂಪದ ‘ಹಸೆ ಚಿತ್ತಾರ’ ಕಲಾವಿದ ಸಿರಿವಂತೆ ಚಂದ್ರಶೇಖರ್ ಗೆ ರಾಜ್ಯೋತ್ಸವ ಪ್ರಶಸ್ತಿ

2024 ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಕರಕುಶಲ ವಿಭಾಗದಲ್ಲಿ ಶಿವಮೊಗ್ಗ  ಜಿಲ್ಲೆಯ ಸಾಗರ ತಾಲೂಕಿನ ಸಿರಿವಂತೆ ಚಂದ್ರಶೇಖರ್‌ ಅವರ ಹೆಸರನ್ನು ಘೋಷಿಸಲಾಗಿದೆ.

ಸಿರಿವಂತೆ ಚಂದ್ರಶೇಖರ್‌ ರವರು ಹಸೆ ಚಿತ್ತಾರ ಬಿಡಿಸುವ ಕಾರ್ಯದಲ್ಲಿ ತಮ್ಮ  ವೃತ್ತಿಯ ಸಾಧನೆಯಲ್ಲಿ ಪ್ರಶಂಸನೀಯ ಕೆಲಸ ಮಾಡಿದ್ದಾರೆ. ಕಳೆದ ಎರಡೂವರೆ ದಶಕದಿಂದ ಹಸೆ ಚಿತ್ತಾರಗಳನ್ನು ರಚಿಸಿ ಜನಪ್ರಿಯಗೊಳಿಸಿದ್ದಾರೆ.

ಇದರಿಂದಾಗಿ ರಾಜ್ಯದಲ್ಲಿ ಹಸೆಚಿತ್ತಾರ ಕಲೆಗೆ ಮತ್ತಷ್ಟು ಗೌರವ ಹೆಚ್ಚಾಗಿದೆ. ಸಾಗರ ತಾಲೂಕಿನ ಸಿರಿವಂತೆ  ಗ್ರಾಮದಲ್ಲಿರುವ ಚಂದ್ರಶೇಖರ್‌ ಅವರ ಮನೆ  “ಹಸೆ ಚಿತ್ತಾರಗಳ ಕಲಾ ಕೇಂದ್ರ” ಎಂದು ಬಣ್ಣಿಸಲಾಗಿದೆ. ಭೂಮಿ ಹುಣ್ಣಿಮೆಗಾಗಿ ಬೂಮಣ್ಣಿ ಬುಟ್ಟಿಗಳನ್ನು ತಯಾರಿಸುವ ಸಿರಿವಂತೆ ಚಂದ್ರಶೇಖರ್‌ ಅವರ ಕಲಾಕೃತಿಗೆ ಕೃಷಿಕರಲ್ಲಿ ಮಹತ್ವ ಪಡೆದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read