BIG NEWS: ಹಾಸನಾಂಬೆ ಗರ್ಭಗುಡಿ ಪ್ರವೇಶಕ್ಕೆ ಸಂಪೂರ್ಣ ನಿರ್ಬಂಧ

ಹಾಸನ: ಹಾಸನಾಂಬೆ ದೇವಾಲಯದ ಆಡಳಿತ ಮಂಡಳಿ ಹಾಗೂ ಜಿಲ್ಲಾಡಳಿತ ಮಹತ್ವದ ನಿರ್ಧಾರ ಕೈಗೊಂಡಿದೆ. ಹಾಸನಾಂಬೆ ಗರ್ಭಗುಡಿ ಒಳಗೆ ಪ್ರವೇಶಿಸಲು ನಿರ್ಬಂಧ ವಿಧಿಸಿದೆ.

ಅರ್ಚಕರನ್ನು ಹೊರತುಪಡಿಸಿ ಉಳಿದ ಯಾರಿಗೂ ಗರ್ಭಗುಡಿ ಪ್ರವೇಶವಿಲ್ಲವೆಂದು ಆಡಳಿತ ಮಂಡಳಿ ಹಾಗೂ ಜಿಲ್ಲಾಡಳಿತ ಆದೇಶ ನೀಡಿದೆ. ಈ ವರೆಗೆ ಗಣ್ಯರು, ಹಿರಿಯರು ಗರ್ಭಗುಡಿ ಒಳಗೆ ಪ್ರವೇಶಿಸಿ ದರ್ಶನ ಪಡೆಯುತ್ತಿದ್ದರು.

ಅಲ್ಲದೇ ಶಿಷ್ಟಾಚಾರ ಕೋಟಾದಡಿಯಲ್ಲಿಯೂ ಗರ್ಭಗುಡಿ ಪ್ರವೇಶಿಸಿ ಹಾಸನಾಂಬೆ ದರ್ಶನ ಪಡೆಯುತ್ತಿದ್ದರು. ಇದರಿಂದ ಧರ್ಮ ದರ್ಶನ ಸಾಲಿನಲ್ಲಿ ಬರುವ ಅಪಾರ ಭಕ್ತರಿಗೆ ತೊಂದರೆಯಾಗುತ್ತಿತ್ತು. ಈ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಜನರ ಒತ್ತಡಕ್ಕೆ ಮಣಿದು ಈ ನಿಯಮ ಜಾರಿ ಮಾಡಲಾಗಿದೆ.

ಹಾಸನಾಂಬೆ ದರ್ಶನಕ್ಕೆ ನ.15ವರೆಗೆ ಮಾತ್ರ ಅವಕಾಶವಿರುವುದರಿಂದ ಪ್ರತಿ ದಿನ ಜನ ಸಾಗರವೇ ಹರಿದು ಬರುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read