BIG NEWS: ಮತ್ತೊಂದು ನವಜಾತ ಶಿಶು ಮಾರಾಟ ಪ್ರಕರಣ; ತಾಯಿ ಸೇರಿ ಐವರು ಅರೆಸ್ಟ್

ಹಾಸನ: ರಾಜ್ಯದಲ್ಲಿ ಮತ್ತೊಂದು ಶಿಶು ಮಾರಾಟ ಪ್ರಕರಣ ಬೆಳಕಿಗೆ ಒಂದಿದೆ. ಒಂದು ದಿನದ ಮಗುವನ್ನು ಹೆತ್ತ ತಾಯಿಯೇ ಮಾರಾಟ ಮಾಡಿದ್ದು, ತಾಯಿ ಸೇರಿ ಐವರನ್ನು ಬಂಧಿಸಲಾಗಿದೆ.

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬ್ಯಾಕರಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಮಗು ಹುಟ್ಟಿದ ಒಂದೇ ದಿನಕ್ಕೆ ಮಾರಾಟ ಮಾಡಲಾಗಿದೆ. 2023ರ ನವೆಂಬರ್ 15ರಂದು ಗಿರಿಜಾ ಎಂಬ ಮಹಿಳೆ ಮಗುವಿಗೆ ಜನ್ಮ ನೀಡಿದ್ದರು. ಈಗಾಗಲೇ ತನಗೆ ಇಬ್ಬರು ಮಕ್ಕಳಿದ್ದಾರೆ ಎಂಬ ಕಾರಣಕ್ಕೆ ಮಾರನೇ ದಿನವೇ ಚಿಕ್ಕಮಗಳೂರು ಮೂಲದ ಉಷಾ ಎಂಬುವವರಿಗೆ ಮಗುವನ್ನು ಮಾರಾಟ ಮಾಡಿದ್ದರು.

ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಮಕ್ಕಳ ರಕ್ಷಣ ಘಟಕದ ಅಧಿಕಾರಿ ಕಾಂತರಾಜು ದೂರು ದಾಖಲಿಸಿದ್ದರು.

ಶಿಶು ಮಾರಾಟಕ್ಕೆ ಆಶಾ ಕಾರ್ಯಕರ್ತೆಯರು ಬೆಂಬಲ ನೀಡಿರುವುದು ಬಯಲಾಗಿದೆ. ನವಜಾತ ಶಿಶು ಮಾರಾಟ ಪ್ರಕರಣ ಸಂಬಂಧ ಇದೀಗ ತಾಯಿ ಗಿರಿಜಾ, ಆಶಾ ಕಾರ್ಯಕರ್ತೆ ಸುಮಿತ್ರಾ, ಮಗು ಖರೀದಿಸಿದ ಮಹಿಳೆ ಉಷಾ, ಶ್ರೀಕಾಂತ್, ಸುಬ್ರಹ್ಮಣ್ಯ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read