ಹಾಸನ: ಕುಡಿದ ಮತ್ತಲ್ಲಿ ಸ್ನೇಹಿತನನ್ನೇ ಹತ್ಯೆಗೈದು ಸೆಲ್ಫಿ ವಿಡಿಯೋ ಮಾಡಿದ್ದ ಆರೋಪಿಯನ್ನು ಹಾಸನ ಪೊಲೀಸರು ಬಂಧಿಸಿದ್ದಾರೆ.
ಉಲ್ಲಾಸ್ (21) ಬಂಧಿತ ಆರೋಪಿ. ಎರಡು ದಿನಗಳ ಹಿಂದೆ ನಗರದ ಬಿಟ್ಟಗೋಡನಹಳ್ಳಿ ಬೈಪಾಸ್ ಬಳಿ ಸ್ನೇಹಿತ ಕೀರ್ತಿಯನ್ನು ಕೊಲೆಗೈದು ಸೆಲ್ಫಿ ವಿಡಿಯೋ ಮಾಡಿದ್ದ. ಕೀರ್ತಿ ಹಾಗೂ ಉಲ್ಲಾಸ್ ಇಬ್ಬರೂ ಆಟೋ ಚಾಲಕರಾಗಿದ್ದರು, ಎರಡು ವರ್ಷಗಳಿಂದ ಸ್ನೇಹಿತರಾಗಿದ್ದರು.
ಕುಡಿದ ಮತ್ತಿನಲ್ಲಿ ಇಬ್ಬರ ನಡುವೆ ಜಗಳ ಆರಂಭವಾಗಿ ಉಲ್ಲಾಸ್ ಕಪಾಳಕ್ಕೆ ಕೀರ್ತಿ ಹೊಡೆದಿದ್ದ. ಇದರಿಂದ ಮತ್ತಷ್ಟು ಕುಡಿದು ಬಂದಿದ್ದ ಉಲ್ಲಾಸ್, ಇನ್ನಿಬ್ಬರ ಜೊತೆಗೂಡಿ ಕೀರ್ತಿಯನ್ನು ಹೊರಗೆ ಕರೆದೊಯ್ದು ಹಲ್ಲೆ ನಡೆಸಿ ಕೊಲೆಗೈದು ಸೆಲ್ಫಿ ವಿಡಿಯೋ ಮಾಡಿದ್ದಾನೆ. ಸದ್ಯ ಉಲ್ಲಾಸ್ ನನ್ನು ಬಂಧಿಸಿರುವ ಪೊಲೀಸರು ಇನ್ನಿಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.
