ಹಾಸನ: ವರ ತಾಳಿ ಕಟ್ಟುವ ಸಂದರ್ಭದಲ್ಲಿ ತನಗೆ ಈ ಮದುವೆ ಬೇಡ ಎಂದು ವಧು ಹಟ ಹಿಡಿದ ಪರಿಣಾಮ ಮದುವೆಯೇ ಮುರಿದು ಬಿದ್ದ ಘಟನೆ ಹಾಸನದಲ್ಲಿ ನಡೆದಿದೆ.
ಹಾಸನದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಬುವನಹಳ್ಳಿಯ ವಧು ಮಾಲೂರಿನ ವರನ ಜೊತೆ ಮದುವೆ ನಿಶ್ಚಯವಾಗಿ ಇಂದು ಅದ್ಧೂರಿ ಮದುವೆ ಸಮಾರಂಭ ನಡೆಯುತ್ತಿತ್ತು. ಬೆಲಿಗ್ಗೆ 8:45ರ ಸುಮಾರಿಗೆ ಶುಭಮುಹೂರ್ತದಲ್ಲಿ ಮದುವೆ ವೇಳೆ ವರ ಇನ್ನೇನು ವಧು ಕೊರಳಿಗೆ ತಾಳಿಕಟ್ತಬೇಕು ಎನ್ನುವಷ್ಟರಲ್ಲಿ ವಧು ಮದುವೆ ಬೇಡ ಎಂದು ನಿರಾಕರಿಸಿದ್ದಾಳೆ.
ಮದುವೆ ಮಂಟಪಕ್ಕೂ ಬರುವ ಕೆಲವೆ ಸಮಯದಲ್ಲಿ ವಧುವಿಗೆ ಒಂದು ಫೋನ್ ಕಾಲ್ ಬಂದಿತ್ತು. ರೂಮ್ ಬಾಗಿಲು ಹಾಕಿಕೊಂಡು ಕೆಲ ಕಾಲ ವಧು ಫೋನ್ ನಲ್ಲಿ ಮಾತನಾಡಿದ್ದಳು ಎನ್ನಲಾಗಿದೆ. ಬಳಿಕ ಮದುವೆ ಮಂಟಪಕ್ಕೆ ಬಂದ ವಧು, ಇನ್ನೇನು ಹರ ತಾಳಿಕಟ್ತಬೇಕು ಎಂದು ಮುಂದಾಗುತ್ತಿದಂತೆ ಮದುವೆ ನಿಲ್ಲಿಸುವಂತೆ ಹೇಳಿದ್ದಾಳೆ. ಬೇರೊಬ್ಬ ಯುವಕನನ್ನು ತಾನು ಪ್ರೀತಿಸುತ್ತಿರುವುದಾಗಿ ಹೇಳಿದ್ದಾಳೆ.
ಪೋಷಕರು ಮನವೊಲಿಸಲು ಯತ್ನಿಸಿದರೂ ಕ್ಯಾರೇ ಎನ್ನದ ವಧು ಮದುವೆಯಾಗಲು ನಿರಾಕರಿಸಿದ್ದಾಳೆ. ಮುಹೂರ್ತದ ವೇಳೆಯೇ ಮದುವೆ ಮುರಿದು ಬಿದ್ದಿದೆ.