ಹಾಸನ: ತಡರಾತ್ರಿ ಪೊಲೀಸರು ಹಾಸನದ ಜೈಲಿನ ಮೇಲೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಹಾಸನ ಎಸ್ಪಿ ತಮ್ಮಯ್ಯ ನೇತೃತ್ವದ ತಂಡ ಈ ದಾಳಿ ನಡೆಸಿದೆ.
ಸುಮಾರು 60 ಜನ ಪೊಲೀಸ್ ಸಿಬ್ಬಂದಿಗಳು ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಜೈಲಿನ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ 17 ಮೊಬೈಲ್ ಜಪ್ತಿ ಮಾಡಲಾಗಿದೆ. ಗಾಂಜಾ, ಬೀಡಿ, ಸಿಗರೇಟ್ ಸೇರಿದಂತೆ ಇನ್ನಿತರ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಹಿಂಡಲಗಾ ಹಾಗೂ ಶಿವಮೊಗ್ಗ ಜೈಲಿನಲ್ಲಿ ಹಣಕೊಟ್ಟ ಕೈದಿಗಳಿಗೆ ರಾಜಾತಿಥ್ಯ, ಮಾದಕ ವಸ್ತುಗಳ ಪೂರೈಕೆ, ಇತರ ಕೈದಿಗಳ ಮೇಲೆ ಸಿಬ್ಬಂದಿಗಳಿಂದ ಹಲ್ಲೆ ಆರೋಪಗಳು ಕೇಳಿಬಂದಿರುವ ಬೆನ್ನಲ್ಲೇ ಇದೀಗ ಪೊಲೀಸರು ಹಾಸನ ಜೈಲಿನ ಮೇಲೆ ಮಧ್ಯರಾತ್ರಿ ದಾಳಿ ನಡೆಸಿ ಪರಿಶೀಲಿಸಿದ್ದಾರೆ ಎನ್ನಲಾಗಿದೆ.