ಹಾಸನ: ಬಟ್ಟೆ ತೊಳೆಯಲು ನಾಲೆಗೆ ಹೋಗಿದ್ದ ಪತ್ನಿ ಕಾಲು ಜಾರಿ ನೀರಿಗೆ ಬಿದ್ದಿದ್ದು, ಆಕೆಯನ್ನು ರಕ್ಷಿಸಲು ಹೋದ ಪತಿ ಕೂಡ ನೀರುಪಾಲಾಗಿದ್ದಾರೆ. ದಂಪತಿ ನೀರಿನಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿರುವ ಘತನೆ ಹಾಸನ ಜಿಲ್ಲೆಯ ನಂಬಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗೋಪಾಲ್ (27) ಹಾಗೂ ದೀಪು (24) ಮೃತ ದುರ್ದೈವಿಗಳು. ಹೇಮಾವತಿ ನಾಲೆಗೆ ಬಟ್ಟೆ ತೊಳೆಯಲೆಂದು ದಂಪತಿ ಹೋಗಿದ್ದರು. ಈ ವೇಳೆ ಪತ್ನಿ ದೀಪು ಕಾಲು ಜಾರಿ ನಾಲೆಗೆ ಬಿದ್ದಿದ್ದಾರೆ. ಆಕೆಯನ್ನು ರಕ್ಷಿಸಲೆಂದು ಗೋಪಾಲ್ ಕೂಡ ನೀರಿಗೆ ಧುಮುಕಿದ್ದಾರೆ. ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ದಂಪತಿ ಎಷ್ಟು ಹೊತ್ತಾದರೂ ಮನೆಗೆ ಬಾರದಿದ್ದಗಾ ಕುಟುಂಬ ಹುಡುಕಾಟ ನಡೆಸಿದೆ. ಬಟ್ಟೆ ತೊಳೆಯಲೆಂದು ಹೋಗಿದ್ದ ದಂಪತಿ ಮನೆಗೆ ವಾಪಾಸ್ ಆಗದಿರುವುದನ್ನು ತಿಳಿದು ನಾಲೆ ಬಳಿ ಹೋಗಿ ನೋಡಿದಾಗ ಬಟ್ಟೆಗಳು ಮಾತ್ರ ದಡದಲ್ಲಿತ್ತು. ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕಾಗಮಿಸಿ ಪರಿಶೀಲಿಸಿದಾಗ ದಂಪತಿ ನಾಲೆಗೆ ಬಿದ್ದು ಸಾವನ್ನಪ್ಪಿರುವುದುದೃಢಪಟ್ತಿದೆ.
ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
