ಹಾಸನ: ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರುಪಾಲಾಗಿರುವ ದಾರುಣ ಘಟನೆ ಹಾಸನ ಜಿಲ್ಲೆಯ ಅರಸಿಕೆರೆ ತಾಲೂಕಿನ ಹುಂಡಿಗನಾಳ ಗ್ರಾಮದಲ್ಲಿ ನಡೆದಿದೆ.
ಕೆರೆಯಲ್ಲಿ ಈಜಲೆಂದು ಐವರು ಹೋಗಿದ್ದರು. ಅವರಲ್ಲಿ ಇಬ್ಬರು ಬಾಲಕರು ನೀರುಪಾಲಾಗಿದ್ದಾರೆ. ವಿಜಯಕುಮಾರ್ (13) ಹಾಗೂ ಸುಜನ್ (12) ಮೃತ ಮಕ್ಕಳು. ಭಾನುವಾರ ರಜೆ ಕಾರಣಕ್ಕೆ ಬೆಳ್ಳಂಬೆಳಿಗ್ಗೆ ಮಕ್ಕಳು ಕೆರೆ ನೀರಿನಲ್ಲಿ ಈಜಲು ಹೋಗಿ ದುರಂತಕ್ಕೀಡಾಗಿದ್ದಾರೆ.
ಜವಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮ ಸಿಬ್ಬಂದಿ ದೌಡಾಯಿಸಿದ್ದು, ಬಾಲಕರ ಶವ ಕೆರೆಯಿಂದ ಮೇಲಕೆತ್ತಲಾಗಿದೆ.
