ಗಮನಾರ್ಹ ಧೈರ್ಯ ಪ್ರದರ್ಶನದ ಕಾರ್ಯದಲ್ಲಿ ಸರ ಕದ್ದು ಪರಾರಿಯಾಗ್ತಿದ್ದ ಕಳ್ಳರ ಮೇಲೆ ಬಸ್ ಚಾಲಕನೊಬ್ಬ ಬಸ್ ಡಿಕ್ಕಿ ಹೊಡೆಸಿ ಅವರನ್ನು ಕೆಳಗೆ ಬೀಳಿಸಿದ ಘಟನೆ ಹರಿಯಾಣದಲ್ಲಿ ನಡೆದಿದೆ.
ಇಡೀ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ. ಸರಗಳ್ಳರಿಬ್ಬರು ವೃದ್ಧೆಯಿಂದ ಸರ ಕದ್ದು ಬೈಕ್ ನಲ್ಲಿ ಪರಾರಿಯಾಗಲು ಯತ್ನಿಸುತ್ತಾರೆ. ಇದನ್ನು ಎದುರುಗಡೆ ಇಂದ ಬರ್ತಿದ್ದ ಬಸ್ ಚಾಲಕ ಗಮನಿಸಿದ್ದು, ಹಿಂಜರಿಯದೆ ಬಸ್ಸನ್ನು ಚಲಾಯಿಸಿ ಉದ್ದೇಶಪೂರ್ವಕವಾಗಿ ಬೈಕ್‌ಗೆ ಡಿಕ್ಕಿ ಹೊಡೆಸಿದ್ದಾರೆ. ಈ ವೇಳೆ ಕಳ್ಳರು ಸಮತೋಲನ ತಪ್ಪಿ ಬಿದ್ದಿದ್ದಾರೆ. ಆದರೆ ಕಳ್ಳರು ತಕ್ಷಣ ಸ್ಥಳದಿಂದ ಕಾಲ್ಕಿತ್ತರು. ಬಳಿಕ ಅವರು ಸಿಕ್ಕಿಬಿದ್ದಿದ್ದಾರೆಯೇ ಎಂಬುದು ಇನ್ನೂ ತಿಳಿದುಬಂದಿಲ್ಲ.
ಆದರೆ ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತ್ವರಿತವಾಗಿ ಹರಿದಾಡುತ್ತಿದೆ. ಬಸ್ ಚಾಲಕನ ತ್ವರಿತ ಆಲೋಚನೆ ಮತ್ತು ಧೈರ್ಯ ಪ್ರಯಾಣಿಕರು ಸೇರಿದಂತೆ ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರವಾಗಿದೆ.
https://twitter.com/Delhiite_/status/1795673485764935986