ಸರ್ಕಾರಿ ಹುದ್ದೆಗಳಲ್ಲಿ ಅಗ್ನಿ ವೀರರಿಗೆ ಶೇ. 10ರಷ್ಟು ಮೀಸಲಾತಿ, ಸ್ವಂತ ಉದ್ಯಮಕ್ಕೆ 5 ಲಕ್ಷ ರೂ. ಸಾಲ ಯೋಜನೆ ಘೋಷಿಸಿದ ಹರಿಯಾಣ ಸರ್ಕಾರ

ಚಂಡೀಗಢ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ, ನಯಾಬ್ ಸಿಂಗ್ ಸೈನಿ ನೇತೃತ್ವದ ಹರಿಯಾಣ ಸರ್ಕಾರವು ಕಾನ್ಸ್‌ ಟೇಬಲ್‌ಗಳು, ಫಾರೆಸ್ಟ್ ಗಾರ್ಡ್‌ಗಳು ಮತ್ತು ಜೈಲು ವಾರ್ಡನ್‌ಗಳ ನೇಮಕಾತಿಯಲ್ಲಿ ಅಗ್ನಿವೀರ್‌ಗಳಿಗೆ ಶೇಕಡಾ 10 ರಷ್ಟು ಮೀಸಲಾತಿ ಮತ್ತು ಇತರ ಹುದ್ದೆಗಳಲ್ಲಿ ಕೋಟಾಗಳನ್ನು ಬುಧವಾರ ಪ್ರಕಟಿಸಿದೆ.

ಯಾವುದೇ ಅಗ್ನಿವೀರ್ ಸ್ವಂತ ಉದ್ಯಮವನ್ನು ಸ್ಥಾಪಿಸಲು ಬಯಸಿದರೆ ಸರ್ಕಾರವು 5 ಲಕ್ಷದವರೆಗೆ ಬಡ್ಡಿರಹಿತ ಸಾಲವನ್ನು ನೀಡುತ್ತದೆ ಎಂದು ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಹೇಳಿದರು.

ರಾಜ್ಯ ಸರ್ಕಾರದಿಂದ ಕಾನ್ಸ್‌ಟೇಬಲ್‌, ಮೈನಿಂಗ್‌ ಗಾರ್ಡ್‌, ಫಾರೆಸ್ಟ್‌ ಗಾರ್ಡ್‌, ಜೈಲು ವಾರ್ಡನ್‌ ಮತ್ತು ವಿಶೇಷ ಪೊಲೀಸ್‌ ಅಧಿಕಾರಿ ಹುದ್ದೆಗಳಿಗೆ ನೇರ ನೇಮಕಾತಿಯಲ್ಲಿ ಅಗ್ನಿವೀರರಿಗೆ ಶೇ 10ರಷ್ಟು ಸಮತಲ ಮೀಸಲಾತಿ ಕಲ್ಪಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗ್ರೂಪ್ ಸಿ ಮತ್ತು ಡಿ ಹುದ್ದೆಗಳಲ್ಲೂ ಮೂರು ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗುವುದು. ಆದಾಗ್ಯೂ, ಅಗ್ನಿವೀರ್‌ ಗಳ ಮೊದಲ ಬ್ಯಾಚ್‌ಗೆ, ಈ ವಯಸ್ಸಿನ ಸಡಿಲಿಕೆಯು ಐದು ವರ್ಷಗಳಾಗಿರುತ್ತದೆ. ಗ್ರೂಪ್ ಸಿ ಸಿವಿಲ್ ಹುದ್ದೆಗಳಿಗೆ ನೇರ ನೇಮಕಾತಿಯಲ್ಲಿ ಅಗ್ನಿವೀರರಿಗೆ ಶೇ.5 ರಷ್ಟು ಸಮತಲ ಮೀಸಲಾತಿ ಇರುತ್ತದೆ. ಅಗ್ನಿವೀರ್‌ಗಳಿಗೆ ಆದ್ಯತೆಯ ಮೇರೆಗೆ ಶಸ್ತ್ರಾಸ್ತ್ರ ಪರವಾನಗಿ ನೀಡಲಾಗುವುದು ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read