BREAKING: ಜಮೀನು ವಿವಾದ ಹಿನ್ನಲೆ ತಾಯಿ, ಸೋದರ ಸೇರಿ ಕುಟುಂಬದ 6 ಸದಸ್ಯರ ಜೀವ ತೆಗೆದ ಮಾಜಿ ಸೈನಿಕ

ಹರಿಯಾಣ: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಮಾಜಿ ಸೈನಿಕ ತನ್ನ ಕುಟುಂಬದ 6 ಸದಸ್ಯರನ್ನು ಕೊಂದಿರುವ ಘಟನೆ ಅಂಬಾಲಾದ ನಾರೈಂಗಢದಲ್ಲಿ ನಡೆದಿದೆ

ನಾರೈಂಗಢ ಪಟ್ಟಣದ ರೇಟರ್ ಗ್ರಾಮದಲ್ಲಿ ಕುಟುಂಬ ಸದಸ್ಯರನ್ನು ಮಾಜಿ ಸೈನಿಕ ಕೊಂದಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಕೊಲೆಯಾದ ಕುಟುಂಬದ ಸದಸ್ಯರಲ್ಲಿ ಆರೋಪಿಯ ತಾಯಿ ಸರೂಪಿ ದೇವಿ(65), ಸಹೋದರ ಹರೀಶ್ ಕುಮಾರ್(35), ಸೊಸೆ ಸೋನಿಯಾ(32), ಸೋದರಳಿಯ ಮಯಾಂಕ್(6 ತಿಂಗಳು) ಮತ್ತು ಇಬ್ಬರು ಸೊಸೆಯರಾದ ಪರಿ(7), ಯಶಿಕಾ (5) ಸೇರಿದ್ದಾರೆ.

ಮಾಜಿ ಸೈನಿಕ ಭೂಷಣ್ ಕುಮಾರ್ ಕೃತ್ಯವೆಸಗಿದ ವ್ಯಕ್ತಿ. ಮಲಗಿದ್ದಾಗ ಕುಟುಂಬ ಸದಸ್ಯರನ್ನು ಬರ್ಬರವಾಗಿ ಕೊಂದು ಹಾಕಿದ್ದು, ತಂದೆಯನ್ನು ಕೊಡಲಿಯಿಂದ ಹೊಡೆದಿದ್ದಾನೆ. ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಸದಸ್ಯರನ್ನು ಹತ್ಯೆಗೈದಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಶವಗಳನ್ನು ಕೊಂದು ಬಳಿಕ ಮನೆಯೊಳಗೆ ಸುಟ್ಟು ಹಾಕಲು ಯತ್ನಿಸಿದ್ದಾನೆ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ.

ಬೆಳಗ್ಗೆ 7 ಗಂಟೆ ಸುಮಾರಿಗೆ ಐದು ಮೃತದೇಹಗಳನ್ನು ತರಲಾಯಿತು ಎಂದು ಅಂಬಾಲಾ ಕಂಟೋನ್ಮೆಂಟ್ ಸಿವಿಲ್ ಆಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ.ಮುಕೇಶ್ ಕುಮಾರ್ ತಿಳಿಸಿದ್ದಾರೆ. ಆರೋಪಿಯ ತಂದೆ ಓಂ ಪ್ರಕಾಶ್ ಅವರು ಪುತ್ರನ ಕೃತ್ಯ ತಡೆಯಲು ಪ್ರಯತ್ನಿಸಿದ್ದಾರೆ. ಆದರೆ ಸಾಧ್ಯವಾಗಿಲ್ಲ. ನೆರೆಹೊರೆಯವರನ್ನು ಎಚ್ಚರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗಾಯಗೊಂಡಿರುವ ಅವರು ಪ್ರಸ್ತುತ ನಾರೇಂಗರ್ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

ಪ್ರಕರಣದ ವಿವರ ನೀಡಿದ ನಾರೈಂಗಢ ಇನ್ಸ್‌ ಪೆಕ್ಟರ್ ರಾಂಪಾಲ್, ಘಟನೆಯಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ ಆರೋಪಿ ಪರಾರಿಯಾಗಿರುವುದರಿಂದ ಬಂಧಿಸಲು ತಂಡಗಳನ್ನು ರಚಿಸಲಾಗಿದೆ ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read