ಮಗುವನ್ನು ಮಲಗಿಸಲು ಎಲೆಕ್ಟ್ರಾನಿಕ್ ತೊಟ್ಟಿಲು; ಅಸಮಾಧಾನ ತೋಡಿಕೊಂಡ ಉದ್ಯಮಿ

ಮನುಕುಲದ ಎಲ್ಲ ಚಟುವಟಿಕೆಗಳೂ ಯಾಂತ್ರಿಕವಾಗುತ್ತಿರುವ ಈ ದಿನಗಳಲ್ಲಿ ಮಗುವಿನ ತೊಟ್ಟಿಲೂ ಸಹ ಎಲೆಕ್ಟ್ರಾನಿಕ್ ಸಾಧನವಾಗಿರುವ ವಿಡಿಯೋವೊಂದು ವೈರಲ್ ಆಗಿದೆ.

ಈ ವಿಡಿಯೋ ಶೇರ್‌ ಮಾಡಿರುವ ಆರ್‌ಪಿಜಿ ಸಮೂಹದ ಚೇರ್ಮನ್ ಹರ್ಷ್ ಗೋಯೆಂಕಾ, “ತಾಯಿಯ ಮಮತೆಭರಿತ ತೂಗುವಿಕೆಗೆ ಇಂಥದ್ದನ್ನು ಎಂದಾದರೂ ಹೋಲಿಸಲು ಸಾಧ್ಯವೇ? ತಂತ್ರಜ್ಞಾನ ಕೆಲವೊಮ್ಮೆ ತೀರಾ ಅತಿಯಾಯಿತು ಎನಿಸುತ್ತದೆ,” ಎಂದು ಕ್ಯಾಪ್ಷನ್ ಹಾಕಿದ್ದಾರೆ.

ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ವ್ಯಕ್ತಿಯೊಬ್ಬರು, “ಮಾನವನ ಸ್ಪರ್ಶ (ಅದರಲ್ಲೂ ತಾಯಿಯ ಸ್ಪರ್ಶ) ಮಗುವನ್ನು ಬೆಳೆಸುವ ವೇಳೆ ಬಹಳ ಮುಖ್ಯವಾದದ್ದು ಎನಿಸುತ್ತದೆ,” ಎಂದು ಬರೆದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read