ʼಐರನ್ ಮ್ಯಾನ್ʼ ಖ್ಯಾತಿಯ ರಾಬರ್ಟ್ ಡೌನಿ ಜೂನಿಯರ್ ಅವರು ಅಗಿದಿದ್ದ ಚ್ಯೂಯಿಂಗ್ ಗಮ್ ಅನ್ನು ಹರಾಜಿಗೆ ಇಡಲಾಗಿದೆ.
ಯಾರಾದರೂ ಅಗಿದಿರುವ ಚ್ಯೂಯಿಂಗ್ ಗಮ್ ಹೀಗೆ ಮಾರಾಟಕ್ಕಾ ಎಂದು ಮೂಗು ಮುರಿಯಬೇಡಿ. ಸೆಲೆಬ್ರಿಟಿಗಳು ಬಳಸಿರುವ ಬಟ್ಟೆಗಳನ್ನು ಖರೀದಿಸಲು ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ. ಅದೇ ರೀತಿ ರಾಬರ್ಟ್ ಡೌನಿ ಜೂನಿಯರ್ ಜಗಿದಿರುವ ಚ್ಯೂಯಿಂಗ್ ಗಮ್ ಖರೀದಿಸಲು ಜನರು ಮುಗಿ ಬೀಳುತ್ತಿದ್ದಾರೆ.
ಒಂದು ವೇಳೆ ನಿಮಗೆ ಇದನ್ನು ಖರೀದಿಸುವ ಆಸೆ ಇದ್ದರೆ ಈ ಬಿಡ್ನಲ್ಲಿ ನೀವು 40,147 ಅಮೆರಿಕನ್ ಡಾಲರ್ ಇಡಬೇಕು. ಭಾರತದ ರೂಪಾಯಿಗಳಲ್ಲಿ ಹೇಳುವುದಾದರೆ ಅಂದಾಜು 32 ಲಕ್ಷ ರೂಪಾಯಿ !
ಕಳೆದ ತಿಂಗಳು ಆಯೋಜಿಸಲಾದ ಜಾನ್ ಫಾವ್ರೊ ಅವರ ಹಾಲಿವುಡ್ ವಾಕ್ ಆಫ್ ಫೇಮ್ ಸಮಾರಂಭದಲ್ಲಿ ರಾಬರ್ಟ್ ಡೌನಿ ಜೂನಿಯರ್ ಕಾಣಿಸಿಕೊಂಡಿದ್ದರು. ಅಲ್ಲಿ ಅವರು ಈ ಚ್ಯೂಯಿಂಗ್ ಗಮ್ ಜಗಿದಿದ್ದು ಅದನ್ನು ಸಂಗ್ರಹಿಸಿ ಇಡಲಾಗಿದೆ.
ಇದೀಗ ಬಿಡ್ಡಿಂಗ್‌ಗಾಗಿ ಪಟ್ಟಿ ಮಾಡಲಾಗಿದ್ದು, ಇದರ ಮೊತ್ತ ರೂ. 32 ಲಕ್ಷದಿಂದ ಆರಂಭವಾಗಲಿದೆ. ಬಿಡ್ಡಿಂಗ್ ಏಪ್ರಿಲ್ 1 ರ ಶನಿವಾರದಂದು ಕೊನೆಗೊಳ್ಳಲಿದೆ. ಅತಿ ಹೆಚ್ಚು ಬಿಡ್ ಮಾಡಿದವರಿಗೆ ಇದನ್ನು ನೀಡಲಾಗುತ್ತದೆ.
You can buy Robert Downey Jr.’s chewed gum — for $40K https://t.co/VekQ2S77hJ pic.twitter.com/y7SbzBmF85
— New York Post (@nypost) March 28, 2023