ಪ್ರಸ್ತದ ದಿನವೇ ಪತ್ನಿಗೆ ಬಿಗ್ ಶಾಕ್: ಲಿಪ್ ಸ್ಟಿಕ್ ಹಚ್ಚಿಕೊಂಡು ಮಹಿಳೆಯರ ಒಳ ಉಡುಪು ಧರಿಸಿ ಮಲಗುವ ಪತಿ

ಬೆಂಗಳೂರು: ತುಟಿಗಳಿಗೆ ಲಿಪ್ ಸ್ಟಿಕ್ ಬಳಿದುಕೊಂಡು ಹೆಣ್ಣು ಮಕ್ಕಳ ಒಡ ಉಡುಪು ಧರಿಸಿ ಪತಿ ಮಲಗುತ್ತಾನೆ. ಇಂತಹ ವಿಚಿತ್ರ ವರ್ತನೆ ವಿರೋಧಿಸಿದ್ದಕ್ಕೆ ಮಾವನ ಮನೆಯವರು ಕಿರುಕುಳ ನೀಡುತ್ತಿದ್ದಾರೆ ಎಂದು 20 ವರ್ಷ ಮಹಿಳೆ ಆರೋಪಿಸಿ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ಎರಡು ವರ್ಷಗಳ ಹಿಂದೆ ಮ್ಯಾಟ್ರಿಮೋನಿಯಲ್ ಮೂಲಕ ಎಂಟೆಕ್ ಪದವೀಧರ ಪರಿಚಿತನಾಗಿದ್ದು, ಖಾಸಗಿ ಕಂಪನಿ ಉದ್ಯೋಗಿಯಾಗಿದ್ದ ಆತನೊಂದಿಗೆ ಮದುವೆಯಾಗಿದೆ. ಪ್ರಸ್ತದ ದಿನವೇ ಕನ್ನಡಿ ಮುಂದೆ ನಿಂತು ಗಂಡ ತುಟಿಗೆ ಬಣ್ಣ ಹಾಕಿಕೊಂಡು ನನ್ನ ಒಳ ಉಡುಪು ಧರಿಸಿ ವಿಚಿತ್ರವಾಗಿ ವರ್ತಿಸಿದ್ದ. ಈ ಬಗ್ಗೆ ಕೇಳಿದ್ದಕ್ಕೆ ನನಗೆ ಗಂಡಸರು ಎಂದರೆ ತುಂಬಾ ಇಷ್ಟ ಎಂದು ಹೇಳಿದ್ದಲ್ಲದೇ, ಮತ್ತೆ ಪ್ರಶ್ನಿಸಿದಾಗ ಜಗಳವಾಡಿ ರೂಮ್ ನಲ್ಲಿ ಕೂಡಿ ಹಾಕಿದ್ದ ಎಂದು ದೂರಿದ್ದಾರೆ.

ಗಂಡ ತನ್ನ ಹೆಸರಲ್ಲಿ ಹೆಣ್ಣುಮಕ್ಕಳ ಒಳ ಉಡುಪುಗಳನ್ನು ಆನ್ ಲೈನ್ ನಲ್ಲಿ ತರಿಸಿಕೊಂಡು ಅವುಗಳನ್ನು ಧರಿಸಿ ಮಲಗುತ್ತಾನೆ. ಈ ವಿಚಿತ್ರ ವರ್ತನೆ ಬಗ್ಗೆ ಚಿಕಿತ್ಸೆ ಕೊಡಿಸಲು ತವರು ಮನೆಯಿಂದ 10 ಲಕ್ಷ ರೂಪಾಯಿ ತರುವಂತೆ ಅತ್ತೆ, ಮಾವ ಒತ್ತಾಯಿಸಿದ್ದಾರೆ. ತನಗೆ ಕಿರುಕುಳ ಕೊಡುತ್ತಿರುವ ಗಂಡ ಮತ್ತು ಅತ್ತೆ, ಮಾವನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮಹಿಳೆ ದೂರು ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read