ವಿದ್ಯಾರ್ಥಿನಿಗೆ ಯುವಕನೊಬ್ಬ ಲೈಂಗಿಕ ಕಿರುಕುಳ ನೀಡುತ್ತಿದ್ದ. ಯುವಕನ ಕಾಟಕ್ಕೆ ಬೇಸತ್ತ ವಿದ್ಯಾರ್ಥಿನಿ ನಡುರಸ್ತೆಯಲ್ಲಿಯೇ ಯುವಕನಿಗೆ ಹಿಗ್ಗಾ ಮುಗ್ಗಾ ಥಳಿಸಿ ಬುದ್ಧಿ ಕಲಿಸಿದ್ದಾಳೆ.
ಅಹಮದಾಬಾದ್ ನಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿನಿ ಯುವಕನಿಗೆ ಬೆಲ್ಟ್ ನಿಂದ ರಸ್ತೆಯಲ್ಲಿ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೆಲ ದಿನಗಳಿಂದ ಯುವಕ ವಿದ್ಯಾರ್ಥಿನಿಗೆ ಕಾಟ ಕೊಡುತ್ತಿದ್ದ. ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇದರಿಂದ ನೊಂದ ವಿದ್ಯಾರ್ಥಿನಿ, ಯುವಕನ್ನನ್ನು ಹಿಡಿದು ರಸ್ತೆ ಮಧ್ಯೆಯೇ ಮನಬಂದಂತೆ ಧರ್ಮದೇಟು ನೀಡಿದ್ದಾಳೆ. ಸಾರ್ವಜನಿಕವಾಗಿ ಆತನ ನೀಚತನವನ್ನು ಬೈಲಿಗೆಳೆದಿದ್ದಾಳೆ. ವಿದ್ಯಾರ್ಥಿನಿಯ ಧೈರ್ಯಕ್ಕೆ ಹಲವರು ಬೆಂಬಲಿಸಿದ್ದಾರೆ. ಲೈಂಗಿಕ ಕಿರುಕುಳ ನೀಡುವವರಿಗೆ ಹೀಗೆ ನಡು ರಸ್ತೆಯಲ್ಲಿ ಬುದ್ಧಿ ಕಲಿಸಬೇಕು. ಮಾನ, ಮರ್ಯಾದೆ ಎಂದು ಹೆದರಬಾರದು ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
https://twitter.com/gharkekalesh/status/1823958070223102211?ref_src=twsrc%5Etfw%7Ctwcamp%5Etweetembed%7Ctwterm%5E1823958070223102211%7Ctwgr%5E7dae2f0adba63236a5758048ecdb6e69c6b1e42e%7Ctwcon%5Es1_c10&ref_url=https%3A%2F%2Ftv9kannada.com%2Ftrending%2Fviral-video-students-confronted-the-harasser-and-beat-him-up-with-belts-on-road-aks-884119.html