ಬೆಂಗಳೂರು : ರಾಜ್ಯದ ಎಲ್ಲಾ ಶಾಲೆ-ಕಾಲೇಜುಗಳಲ್ಲಿ ಆ.15 ರಂದು ‘ಹರ್ ಘರ್ ತಿರಂಗಾ’ ಕಾರ್ಯಕ್ರಮ ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಏನಿದೆ ಸುತ್ತೋಲೆಯಲ್ಲಿ..?
ಅಸಂಖ್ಯಾತ ಜನರ ಹೋರಾಟ, ತ್ಯಾಗ, ಬಲಿದಾನದಿಂದ ಪಡೆದುಕೊಂಡ ಸ್ವಾತಂತ್ಯಕ್ಕೆ ಕಾರಣರಾದ ಎಲ್ಲರನ್ನೂ ಸದಾ ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಇಂದಿನ ನಮ್ಮ ಸಂಭ್ರಮಕ್ಕೆ ತಳಪಾಯವಾಗಿ, ಮೆಟ್ಟಿಲುಗಳಾಗಿ ತಮ್ಮ ಜೀವನವನ್ನು ತ್ಯಾಗ ಮಾಡಿದ ಎಲ್ಲರನ್ನು ಮರೆಯದೆ ಸದಾ ಸ್ಮರಿಸುತ್ತಾ ಭವ್ಯ ಭಾರತವನ್ನು ಕಟ್ಟುವಲ್ಲಿ ನಮ್ಮ ಜವಾಬ್ದಾರಿಯುತ ಪಾತ್ರವನ್ನು ನಿರ್ವಹಿಸಬೇಕಿದೆ.
ದೇಶಾದ್ಯಂತ ಭಾರತದ ಸ್ವಾತಂತ್ರ್ಯದ 75ರ ಅಮೃತ ಮಹೋತ್ಸವದ ಸಂಭ್ರಮವನ್ನು ವೈವಿಧ್ಯಮಯವಾಗಿ ಆಚರಿಸಲಾಗುತ್ತಿದೆ. ಈ ಸಂಭ್ರಮದ ಒಂದು ಭಾಗವಾಗಿ ಕೇಂದ್ರ ಸರ್ಕಾರವು ಪ್ರತಿ ವರ್ಷ “ಹರ್ ಘರ್ ತಿರಂಗಾ” ಎಂಬ ಘೋಷ ವಾಕ್ಯದೊಂದಿಗೆ 2025ರ ಸ್ವಾತಂತ್ರ್ಯ ದಿನವನ್ನು ಪ್ರತಿ ಮನೆ-ಮನೆಯಲ್ಲೂ ರಾಷ್ಟ್ರಧ್ವಜವನ್ನು ಹಾರಿಸಿ ಮತ್ತು ಅದರ ಸೆಲ್ಸಿ ಫೋಟೋವನ್ನು ದಿನಾಂಕ: 13.08.2025 ರಿಂದ ದಿನಾಂಕ:15.08.2025 ರೊಳಗೆ Photo upload ಮಾಡುವಂತೆ, ಕ್ರಮವಹಿಸುವುದು. ಈ ಹಿನ್ನೆಲೆಯಲ್ಲಿ ರಾಜ್ಯದ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲಾ ಕಾಲೇಜುಗಳ ಶಿಕ್ಷಕರು, ಮಕ್ಕಳು, ಶಿಕ್ಷಣ ಇಲಾಖೆಯ ಎಲ್ಲಾ ಸ್ತರದ ಸಿಬ್ಬಂದಿಗಳು ಹಾಗೂ ಅವರ ಕುಟುಂಬ ವರ್ಗದವರು ಸೇರಿ ಸ್ವತ: ತಾವೇ ಕ್ರಿಯಾಶೀಲರಾಗಿ ಭಾಗವಹಿಸುವಂತೆ ಪ್ರೇರೇಪಿಸುವುದು. ಹರ್ ಘರ್ ತಿರಂಗ ಚಟುವಟಿಕೆಗಳನ್ನು ದಿನಾಂಕ:02.08.2025 ರಿಂದ 15.08.2025ರ ವರೆಗೆ ಹಮ್ಮಿಕೊಳ್ಳುವುದು.
ಶಾಲಾ/ಕಾಲೇಜುಗಳ ಹಂತದಲ್ಲಿ ಶಿಕ್ಷಕರು ಹಾಗೂ ಉಪನ್ಯಾಸಕರು ಕೆಳಕಂಡಂತೆ ಕ್ರಮವಹಿಸುವುದು.
ಶಾಲೆಗಳಲ್ಲಿ ಹಮ್ಮಿಕೊಳ್ಳಬೇಕಾದ ಚಟುವಟಿಕೆಗಳು:
- ತಿರಂಗಾ ಶೈಲಿಯ ಕಲೆಗಳಿಂದ ಶಾಲೆಯ ಗೋಡೆಗಳು ಮತ್ತು ಫಲಕಗಳನ್ನು ಅಲಂಕರಿಸುವುದು.
- ತಿರಂಗಾ ರಂಗೋಲಿ ಸ್ಪರ್ಧೆಗಳನ್ನು ಆಯೋಜಿಸುವುದು.
- ತಿರಂಗಾ ರಾಖಿ ತಯಾರಿಕೆಯ ಸ್ಪರ್ಧೆಗಳು ಮತ್ತು ಕಾರ್ಯಾಗಾರಗಳನ್ನು ಆಯೋಜಿಸುವುದು.
- ತಿರಂಗಾ ದಿನದ ಮಹತ್ವವನ್ನು ಆಚರಿಸುವಂತೆ ಜವಾನರು ಮತ್ತು ಪೊಲೀಸ್ ಸಿಬ್ಬಂದಿಗೆ ಸ್ಪಿರಿಟ್ ಆಫ್ ತಿರಂಗವನ್ನು ಉತ್ತೇಜಿಸಲು ಪತ್ರ ಬರೆಯುವುದು
- ಶಾಲೆಗಳಿಂದ ಜವಾನರು ಮತ್ತು ಪೊಲೀಸ್ ಸಿಬ್ಬಂದಿಗೆ ಬರೆದಿರುವ ಪತ್ರಗಳನ್ನು ಸಂಗ್ರಹಿಸುವುದು ಮತ್ತು ಜವಾನರು ಮತ್ತು ಪೊಲೀಸ್ ಸಿಬ್ಬಂದಿಗೆ ವಿತರಿಸುವುದು.
- ‘ಹರ್ ಘರ್ ತಿರಂಗಾ’ ರಾಷ್ಟ್ರೀಯ ಕ್ವಿಜ್ನಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆಯನ್ನು ಉತ್ತೇಜಿಸಿ.

