BIG NEWS: ಧ್ವಜ ವಿವಾದ ಪ್ರಕರಣ; ಹ್ಯಾಂಡಲ್ ಮಾಡಿದ ರೀತಿಯೇ ತಪ್ಪು; ಸರ್ಕಾರದ ನಡೆಗೆ ಸಂಸದೆ ಸುಮಲತಾ ಆಕ್ಷೇಪ

ಮಂಡ್ಯ: ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ನಡೆದ ಧ್ವಜ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಂಸದೆ ಸುಮಲತಾ, ಸರ್ಕಾರದ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೆ ಸುಮಲತಾ, ಸರ್ಕಾರ ಧ್ವಜ ವಿಚಾರವನ್ನು ಹ್ಯಾಂಡಲ್ ಮಾಡಿದ ರೀತಿಯೇ ತಪ್ಪಾಗಿದೆ. ಮೊಂಡುತನದ ವಾದದಿಂದ ಈ ರೀತಿ ವಿವಾದ ಸೃಷ್ಟಿಯಾಗಿದೆ. ವಿವಾದ ಸೃಷ್ಟಿಯಾಗಿದ್ದರ ಹಿಂದೆ ಯಾರದ್ದೋ ಕೈವಾಡವಿದೆ ಎಂದು ಹೇಳಿದ್ದಾರೆ.

ರಾಷ್ಟ್ರಧ್ವಜ ಹಾರಿಸಬೇಕಂದ್ರೆ 6 ದಿನ ಮೊದಲೇ ಮಾಡಬೇಕಿತ್ತು. 6 ದಿನಗಳ ಹಿಂದೆಯೇ ಹನುಮ ಧ್ವಜವನ್ನು ತೆರವು ಮಾಡಬೇಕಿತ್ತು. ಸರ್ಕಾರದ ನಡೆ ಸೂಕ್ತವಾಗಿಲ್ಲ. ಈಗ ಬಲವಂತವಾಗಿ ಜನರ ಭಾವನೆಗಳಿಗೆ ಧಕ್ಕೆ ತರುವಂತೆ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read