ಬೆಂಗಳೂರಿನಲ್ಲಿ ರಸ್ತೆ ಗುಂಡಿಗೆ ಬಿದ್ದ ವಿಕಲಚೇತನ ಮಹಿಳೆ : ‘ಬ್ರ್ಯಾಂಡ್ ಬೆಂಗಳೂರು’ ಇದೇನಾ ಎಂದು ಜೆಡಿಎಸ್ ಕಿಡಿ..!

ಬೆಂಗಳೂರಿನಲ್ಲಿ ಮಳೆ ದೊಡ್ಡ ಅವಾಂತರ ಸೃಷ್ಟಿಸಿದೆ. ಬೆಂಗಳೂರಿನ ರಸ್ತೆಗಳು ಗುಂಡಿಗಳಾಗಿ ಪರಿಣಮಿಸಿದೆ.ವಿಕಲಚೇತನ ಮಹಿಳೆಯೊಬ್ಬರು ಬೈಕ್ ಸಮೇತ ಗುಂಡಿಗೆ ಬಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಜೆಡಿಎಸ್ ಕಿಡಿ
ದುಷ್ಟ ಕಾಂಗ್ರೆಸ್ ಸರ್ಕಾರದ ದುರಾಡಳಿತದಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ಮುಳುಗಿದ್ದು ಕೆರೆಯಾಗಿ ಮಾರ್ಪಟ್ಟಿದೆ. ರಾಜಧಾನಿಯ ರಸ್ತೆಗಳೆಲ್ಲ ನೀರು ತುಂಬಿಕೊಂಡಿದ್ದು, ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಹಲವು ಬಡಾವಣೆಗಳು ಜಲಾವೃತವಾಗಿ ಮನೆಗಳಿಗೆ ನೀರು ನುಗ್ಗಿ ಸ್ಥಳೀಯ ನಿವಾಸಿಗಳ ಪರದಾಡುತ್ತಿದ್ದಾರೆ.

ಬ್ರಾಂಡ್ ಬೆಂಗಳೂರಿಗೆ ಸ್ವಾಗತ! ವಿಕಲಚೇತನ ಮಹಿಳೆ ಗುಂಡಿಗೆ ಬಿದ್ದಿದ್ದಾರೆ. ಡಿಕೆಶಿ ಅವರ ‘ದೂರದೃಷ್ಟಿಯ’ ಆಡಳಿತಕ್ಕಾಗಿ ಬೆನ್ನು ತಟ್ಟಿಕೊಳ್ಳುತ್ತಲೇ ಇರುವ ನಗರದ ಮೂಲಸೌಕರ್ಯಗಳು ಕುಸಿಯುತ್ತಿದೆ . ರಸ್ತೆಗಳನ್ನು ಸಾವಿನ ಬಲೆಗಳನ್ನಾಗಿ ಪರಿವರ್ತಿಸುವಲ್ಲಿ ಬಿಬಿಎಂಪಿಯ ಪಾಂಡಿತ್ಯಕ್ಕೆ ಸಾಟಿಯಿಲ್ಲ. ನಮ್ಮ ಹೆಮ್ಮೆಯ ನಗರವನ್ನು ಇಟಲಿಯ ವೆನಿಸ್ ಮಾಡಿ ಕೃತಾರ್ಥರಾಗಿದ್ದಾರೆ. •ಭಾರತದ ಸಿಲಿಕಾನ್ ವ್ಯಾಲಿ, ಉದ್ಯಾನನಗರಿಯಾಗಿದ್ದ ಬೆಂಗಳೂರಿನ ಕೆರೆಗಳನ್ನು ಒಂದಾದ ಮೇಲೆ ಒಂದರಂತೆ ನುಂಗಿದ ಪರಿಣಾಮ ಬೆಂಗಳೂರಿಗೆ ಬೆಂಗಳೂರೇ ಕೆರೆಯಾಗಿಬಿಟ್ಟಿದೆ!!ಎಂದು ಜೆಡಿಎಸ್ ಕಿಡಿಕಾರಿದೆ.

https://twitter.com/JanataDal_S/status/1848571195081560099

https://twitter.com/JanataDal_S/status/1848590710527648117

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read