BIG NEWS: ಹಾನಗಲ್ ಗ್ಯಾಂಗ್ ರೇಪ್ ಕೇಸ್; ನಮ್ಮ ಬಾಯಿ ಮುಚ್ಚಿಸಲು 50 ಲಕ್ಷ ಆಮಿಷವೊಡ್ದಿದ್ದರು; ಸಂತ್ರಸ್ತೆ ಪತಿ ಗಂಭೀರ ಆರೋಪ

ಹಾವೇರಿ: ಹಾನಗಲ್ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ಪತಿ ಗಂಭೀರ ಆರೋಪ ಮಾಡಿದ್ದು, ನಮ್ಮ ಬಾಯಿ ಮುಚ್ಚಿಸಲು ಲಕಾಂತರ ರೂಪಾಯಿ ಹಣದ ಆಮಿಷ ಒಡ್ಡಲಾಗಿತ್ತು ಎಂದು ತಿಳಿಸಿದ್ದಾರೆ.

ಹಾನಗಲ್ ಗ್ಯಾಂಗ್ ರೇಪ್ ಪ್ರಕರಣ ಮುಚ್ಚಿ ಹಾಕಲು ಪೊಲೀಸರೇ ಯತ್ನಿಸಿದ್ದಾರೆ ಎಂಬ ವಿಪಕ್ಷ ಬಿಜೆಪಿ ನಾಯಕರ ಆರೋಪದ ಬೆನ್ನಲ್ಲೇ ಇದೀಗ ಸಂತ್ರಸ್ತೆಯ ಪತಿ ತೌಸಿಪ್ ಸುದ್ದಿಗಾರರೊಂದಿಗೆ ಮಾತನಾಡುತ್ತ, ನಮ್ಮ ಬಾಯಿ ಮುಚ್ಚಿಸಲು 50 ಲಕ್ಷ ರೂಪಾಯಿವರೆಗೆ ಆಮಿಷವೊಡ್ಡಿದ್ದರು ಎಂದು ಆರೋಪಿಸಿದ್ದಾರೆ.

ಪ್ರಕರಣ ಸಂಬಂಧ ನಾವು ಹಾವೇರಿ ಕೋರ್ಟ್ ಹಾಗೂ ಪೊಲೀಸ್ ಸ್ಟೇಷನ್ ಗೆ ಹೋದಾಗ ಆಮಿಷವೊಡ್ಡಿದ್ದಾರೆ. ಆದರೆ ಅವರ ಆಮಿಷಕ್ಕೆ ಬಗ್ಗದೆ ಕುಟುಂಬದವರಿಗೆ ಆಕೆ ವಿಷಯ ತಿಳಿಸಿದ್ದಾಳೆ. ಅವರ ಯಾವ ಆಮಿಷಕ್ಕೂ ನಾವು ಒಪ್ಪಲ್ಲ, ನಮಗೆ ನ್ಯಾಯ ಬೇಕು. ಕೃತ್ಯವೆಸಗಿದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ಈ ವಿಚಾರದಲ್ಲಿ ರಾಜಕೀಯ ಬೇಡ. ಪತ್ನಿಯ ಆರೋಗ್ಯ ಸರಿಯಿಲ್ಲ, ಆಕೆ ಏನನ್ನೂ ಹೇಳುವ ಸ್ಥಿಯಲ್ಲಿಲ್ಲ. ಪತ್ನಿಗೆ ಆದ ಅನ್ಯಾಯಕ್ಕೆ ನ್ಯಾಯ ಸಿಗಬೇಕು ಎಂದು ಅಳಲು ತೋಡಿಕೊಂಡಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read