ಸ್ನಾನದ ನಂತರ ನಾವು ಮಾಡುವ ಈ ತಪ್ಪುಗಳೇ ಕೂದಲು ಹಾಳಾಗಲು ಕಾರಣ

ವಾತಾವರಣದ ಕೊಳೆ, ಧೂಳು, ಬಿಸಿಲಿನಿಂದಾಗಿ ಕೂದಲನ್ನು ರಕ್ಷಿಸಲು ನಾವು ಕೂದಲನ್ನು ವಾಶ್ ಮಾಡುತ್ತೇವೆ. ಆದರೆ ನಾವು ಕೂದಲು ವಾಶ್  ಮಾಡಿದ ಬಳಿಕ ಮಾಡುವಂತಹ ಕೆಲವು ತಪ್ಪುಗಳಿಂದ ಕೂದಲು ಮತ್ತಷ್ಟು ಹಾಳಾಗುತ್ತದೆ. ಅದು ಏನೆಂಬುದನ್ನು ತಿಳಿದುಕೊಳ್ಳಿ.

*ಪ್ರತಿಬಾರಿ ಕೂದಲನ್ನು ತಣ್ಣೀರಿನಿಂದ ತೊಳೆಯಿರಿ. ಇದರಿಂದ ಕೂದಲಿನ ಬುಡದಲ್ಲಿ ರಕ್ತ ಸಂಚಾರವಾಗುತ್ತದೆ. ಬಿಸಿ ನೀರಿನಿಂದ ಮಾತ್ರ ಕೂದಲನ್ನು ವಾಶ್ ಮಾಡಬೇಡಿ. ಇದರಿಂದ ತೇವಾಂಶ ಕಡಿಮೆಯಾಗುತ್ತದೆ.

*ಸ್ನಾನದ ಬಳಿಕ ಕೂದಲಿನಲ್ಲಿರುವ ನೀರನ್ನು ಒರೆಸಿಕೊಳ್ಳಲು ಟವೆಲ್ ನ್ನು ಬಳಸುತ್ತೇವೆ. ಆದರೆ ಟವೆಲ್ ನಿಂದ ನಿಧಾನವಾಗಿ ಒರೆಸಿಕೊಳ್ಳಿ. ಜೋರಾಗಿ ಉಜ್ಜಬೇಡಿ.

*ಕೂದಲನ್ನು ವಾಶ್ ಮಾಡುವಾಗ ಕಂಡೀಷನರ್, ಸೀರಮ್ ನ್ನು ಬಳಸಿ. ಇದರಿಂದ ಕೂದಲು ಡ್ರೈ ಆಗುವುದು ಕಡಿಮೆಯಾಗುತ್ತದೆ.

*ಕೂದಲನ್ನು ಪದೇ ಪದೇ ಬಾಚಿಕೊಳ್ಳಿ. ಇದರಿಂದ ಕೂದಲು ಗಂಟುಕಟ್ಟಿಕೊಳ್ಳುಮವುದಿಲ್ಲ. ಇಲ್ಲವಾದರೆ ಕೂದಲು ಗಂಟುಕಟ್ಟಿಕೊಂಡು ತುಂಡಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read