ಬೇಬಿ ಮಾನಿಟರ್‌ನಲ್ಲಿ ಭಯಾನಕ ಅನುಭವ: ಮಗುವಿನೊಂದಿಗೆ ಅಪರಿಚಿತ ಮಹಿಳೆ ಮಾತು !

ಅನಾರೋಗ್ಯದಿಂದ ಬಳಲುತ್ತಿದ್ದ ತಮ್ಮ ಮಗುವಿನ ಮೇಲೆ ನಿಗಾ ಇರಿಸಲು ವೈ-ಫೈ ಸೌಲಭ್ಯವಿರುವ ಸಿಸಿಟಿವಿ ಕ್ಯಾಮೆರಾವನ್ನು ಬಳಸುತ್ತಿದ್ದ ತಾಯಿಗೆ ಭಯಾನಕ ಅನುಭವವೊಂದು ಎದುರಾಗಿದೆ. ರೆಡ್ಡಿಟ್‌ನಲ್ಲಿ ಹಂಚಿಕೊಂಡ ಈ ಘಟನೆಯಲ್ಲಿ, ಮಗುವಿನೊಂದಿಗೆ ಅಪರಿಚಿತ ಮಹಿಳೆಯ ಧ್ವನಿ ಮಾತನಾಡುತ್ತಿರುವುದನ್ನು ಆಕೆ ಕೇಳಿಸಿಕೊಂಡಿದ್ದಾಳೆ.

ತಾಯಿ ಸ್ವಲ್ಪ ಸಮಯದ ಮಟ್ಟಿಗೆ ಮಗುವಿನ ಕೋಣೆಯಿಂದ ಹೊರಗೆ ಹೋಗಿದ್ದಳು. ಮಾನಿಟರ್‌ನಲ್ಲಿ ನೋಡುತ್ತಿದ್ದಾಗ, ತನ್ನ ಮಗುವಿನೊಂದಿಗೆ ಯಾರೋ ಮಾತನಾಡುತ್ತಿರುವ ಶಬ್ದ ಕೇಳಿಸಿತು. ಕೂಡಲೇ ಪತಿ ಬಳಿ ವಿಚಾರಿಸಿದಾಗ ಅವರು ಮನೆಯಲ್ಲಿ ಯಾರೂ ಇಲ್ಲ ಎಂದು ತಿಳಿಸಿದರು. ಕೂಡಲೇ ಕೋಣೆಗೆ ಧಾವಿಸಿದಾಗ, ಧ್ವನಿ ಸಿಸಿಟಿವಿ ಕ್ಯಾಮೆರಾದಿಂದ ಬರುತ್ತಿತ್ತು. ಭಯಭೀತಳಾದ ಆಕೆ ತಕ್ಷಣ ಕ್ಯಾಮೆರಾವನ್ನು ಆಫ್ ಮಾಡಿ ಬಿಸಾಡಿದ್ದಾಳೆ.

ನಂತರ ವಿಚಾರಿಸಿದಾಗ, ಕಳೆದ ನಾಲ್ಕು ದಿನಗಳಿಂದಲೂ ಇದು ನಡೆಯುತ್ತಿತ್ತು ಎಂದು ತಿಳಿದುಬಂದಿದೆ. ಟಿವಿ ಅಥವಾ ಬೇರೆ ಶಬ್ದ ಎಂದುಕೊಂಡಿದ್ದರಿಂದ ಅವರು ಇದನ್ನು ನಿರ್ಲಕ್ಷಿಸಿದ್ದರು. ಕ್ಯಾಮೆರಾದ ಭದ್ರತೆ ಸರಿ ಇಲ್ಲದ ಕಾರಣ ಯಾರೋ ಅದನ್ನು ಹ್ಯಾಕ್ ಮಾಡಿ ಒಳನುಗ್ಗಿದ್ದಾರೆಂದು ತಿಳಿದುಬಂದಿದೆ.

ಈ ಘಟನೆಯು ಬೇಬಿ ಮಾನಿಟರ್‌ಗಳು ಮತ್ತು ಸಿಸಿಟಿವಿ ಕ್ಯಾಮೆರಾಗಳಂತಹ ಅಂತರ್ಜಾಲ ಸಂಪರ್ಕಿತ ಸಾಧನಗಳನ್ನು ಬಳಸುವಾಗ ಭದ್ರತಾ ಕ್ರಮಗಳ ಮಹತ್ವವನ್ನು ಎತ್ತಿ ತೋರಿಸುತ್ತದೆ. ಇಂತಹ ಸಾಧನಗಳ ಭದ್ರತಾ ವೈಶಿಷ್ಟ್ಯಗಳ ಬಗ್ಗೆ ಬಳಕೆದಾರರು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು ಮತ್ತು ತಮ್ಮ ವೈ-ಫೈ ನೆಟ್‌ವರ್ಕ್‌ಗಳನ್ನು ಅನಧಿಕೃತ ಪ್ರವೇಶದಿಂದ ರಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read