BIG NEWS: ‘ಇಂಡಿಯಾ’ ಪಕ್ಷದ ಸೀಟು ಗೆಲ್ಲಲು ಕಾಂಗ್ರೆಸ್, ತಮಿಳುನಾಡಿಗೆ ಕರ್ನಾಟಕವನ್ನೇ ಅಡವಿಟ್ಟಿದೆ; ಹೆಚ್.ಡಿ.ರೇವಣ್ಣ ವಾಗ್ದಾಳಿ

ಕಲಬುರ್ಗಿ: ರಾಜ್ಯ ಕಾಂಗ್ರೆಸ್ ಸರ್ಕಾರ ರೈತರ ಹಿತ ಕಾಯುವಲ್ಲಿ ವಿಫಲವಾಗಿದೆ. ಕರ್ನಾಟಕ ಹಾಗೂ ತಮಿಳುನಾಡು ‘ಎ’ ಟೀಂ, ‘ಬಿ’ ಟೀಂ ಆಗಿದೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.

ಕಲಬುರ್ಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ.ರೇವಣ್ಣ, ಇಂಡಿಯಾ ಪಕ್ಷದ ಸೀಟುಗಳನ್ನು ಗೆಲ್ಲಲು ತಮಿಳುನಾಡಿಗೆ ಕರ್ನಾಟಕವನ್ನು ಅಡವಿಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಕಾಂಗ್ರೆಸ್ ನಿಂದ ಆಪರೇಷನ್ ಹಸ್ತ ವಿಚಾರವಾಗಿ ಪ್ರತಿಕ್ರಿಯಿಸಿದ ರೇವಣ್ಣ, ಅದರ ಬಗ್ಗೆ ನಾವು ತಲೆಕೆಡಿಸಿಕೊಳ್ಳಲ್ಲ. 1991ರಿಂದ ರಾಜಕೀಯ ನೋಡುತ್ತಿದ್ದೇನೆ. ಆಪರೇಷನ್ ಕೈಗೆ ನಾವು ಹೆದರಲ್ಲ. ಕಾಂಗ್ರೆಸ್ ನವರು ಕೋಮುವಾದಿಗಳನ್ನು ದೂರ ಇಡಬೇಕು ಅಂತಾರೆ ಆದರೆ ನಮ್ಮನ್ನು ಯಾವ ರೀತಿ ನಡೆಸಿಕೊಂಡಿದ್ದಾರೆ? ಎಂದು ಪ್ರಶ್ನಿಸಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read