ಹಾಸನ: ಹೆಚ್.ಡಿ.ರೇವಣ್ಣ ಅಂದ್ರೆ ಏನು? ಹೆಚ್.ಡಿ.ಕುಮಾರಸ್ವಾಮಿ ಅಂದ್ರೆ ಏನು? ದೇವೇಗೌಡರು ಅಂದ್ರೆ ಏನು? ಎಂಬುದನ್ನು ತೋರಿಸುವ ಕಾಲ ಬರುತ್ತೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ತಿಳಿಸಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ.ರೇವಣ್ಣ, ದೇವೇಗೌಡರಿಗೆ ಯಾರೆಲ್ಲ ಯಾವೆಲ್ಲ ರೀತಿ ತೊಂದರೆ ಕೊಟ್ಟರು ಎಂಬುದು ಗೊತ್ತಿದೆ. ಮುಂದಿನ ದಿನಗಳಲ್ಲಿ ಜೆಡಿಎಸ್ ಗೆ ಒಳ್ಳೆಯ ಕಾಲಬರಲಿದೆ. ನಾವೇನೆಂಬುದನ್ನು ತೋರಿಸುವ ಕಾಲ ಬಂದೇ ಬರುತ್ತದೆ. ಸೂಕ್ತ ಸಮಯದಲ್ಲಿ ಎಲ್ಲವನ್ನೂ ಹೇಳುತ್ತೇನೆ ಎಂದು ಹೇಳಿದರು.