BIG NEWS: ಮಾಜಿ ಸಿಎಂ HDK ಮನೆಗೆ ಅನಧಿಕೃತ ವಿದ್ಯುತ್ ಪಡೆದಿದ್ದು ನಿಜ; ಬೆಸ್ಕಾಂ ಇಇ ಸುಧಾಕರ್ ರೆಡ್ಡಿ ಮಾಹಿತಿ


ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಜೆ.ಪಿ.ನಗರದ ನಿವಾಸದಲ್ಲಿ ದೀಪಾಲಂಕಾರಕ್ಕಾಗಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬೆಸ್ಕಾಂ ಅಧಿಕಾರಿಗಳು ಮಾಜಿ ಸಿಎಂ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬೆಸ್ಕಾಂ ಇಇ ಸುಧಾಕರ್ ರೆಡ್ಡಿ, ಕಂಬದಿಂದ ಅನಧಿಕೃತವಾಗಿ ವಿದ್ಯುತ್ ಪಡೆದಿದ್ದು ನಿಜ. ಅದಕ್ಕೆ ಅನುಗುಣವಾಗಿ ಕಾನೂನು ಪ್ರಕಾರ ದಂಡ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ.

ಮೂರು ದಿನಗಳಲ್ಲಿ ದಂಡದ ಪ್ರಕ್ರಿಯೆ ನಡೆಯಲಿದೆ. ಮೇಲಧಿಕಾರಿಗಳು ನಿಗದಿತ ದಂಡದ ಮೊತ್ತ ವಿಧಿಸುತ್ತಾರೆ. ದಂಡ ಪಾವತಿಸಲು ಸಿದ್ಧರಿರುವುದಾಗಿ ಮನೆಯ ಮಾಲೀಕರು ಹೇಳಿದ್ದಾರೆ. ಬೆಸ್ಕಾಂ ಪರಿಶೀಲನೆಗೂ ಸಹಕಾರ ನೀಡಿದ್ದಾರೆ ಎಂದು ತಿಳಿಸಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read