ಕೇಂದ್ರದಲ್ಲಿ ಮಂತ್ರಿಯಾಗುತ್ತಿರುವುದು ಸಂತಸ; ಯಾವುದೇ ಖಾತೆ ಬಗ್ಗೆ ಒತ್ತಡ ಹಾಕಿಲ್ಲ; ಮಾಜಿ ಸಿಎಂ ಕುಮಾರಸ್ವಾಮಿ ಸ್ಪಷ್ಟನೆ

ನವದೆಹಲಿ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಸಚಿವರಾಗುತ್ತಿದ್ದು, ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಬಗ್ಗೆ ಸಂತಸ ಹಂಚಿಕೊಂಡಿರುವ ಕುಮರಸ್ವಾಮಿ, ಮೋದಿ ಸಂಪುಟದಲ್ಲಿ ಮಂತ್ರಿಯಾಗುತ್ತಿರುವುದು ಸಂತಸ ತಂದಿದೆ ಎಂದಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ನಾನು ಯಾವುದೇ ಖಾತೆ ನೀಡಬೇಕು ಎಂದು ಒತ್ತಾಯಿಸಿಲ್ಲ. ಯಾವ ಖಾತೆ ನೀಡಬೇಕು ಎಂಬುದು ಮೋದಿಯವರಿಗೆ ಬಿಟ್ಟ ನಿರ್ಧಾರ. ಅವರಿಗೆ ನನಗಿಂತ ದೇವೇಗೌಡರ ಬಗ್ಗೆ ಅಪಾರ ಗೌರವವಿದೆ. ಅವರೇ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.

ಕೃಷಿ ಖಾತೆ ಕೊಟ್ಟರು ಬಹಳ ಸಂತೋಷ. ಸಕ್ಕರೆ ಖಾತೆಯೂ ಒಳ್ಳೆಯ ಖಾತೆ. ಆದರೆ ನಾನು ಇಂತದ್ದೇ ಖಾತೆ ಬೇಕು ಎಂದು ಹೇಳಿಲ್ಲ. ಜನರ ಮಧ್ಯೆ ಉತ್ತಮವಾಗಿ ಕಾರ್ಯನಿರ್ವಹಿಸಬೇಕು ಎಂಬುದಷ್ಟೇ ನನ್ನ ಒಲವು ಎಂದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read