SHOCKING NEWS: ಪತ್ನಿಗೆ ನೇಣು ಬಿಗಿದುಕೊಂಡಿದ್ದಾಗಿ ಹೆದರಿಸಲು ಹೋಗಿ ನಿಜವಾಗಿಯೂ ಸಾವನ್ನಪ್ಪಿದ ಪತಿ

ಬೆಂಗಳೂರು: ಪತ್ನಿಗೆ ವಿಡಿಯೋ ಕಾಲ್ ಮಾಡಿ ನೇಣುಬಿಗಿದುಕೊಂಡಿದ್ದಾಗಿ ಹೆದರಿಸಲು ಹೋಗಿ ಪತಿ ನಿಜಕ್ಕೂ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬಿಹಾರ ಮೂಲದ ಅಮಿತ್ ಕುಮಾರ್ (28) ಮೃತ ದುರ್ದೈವಿ. ಅಮಿತ್ ಕುಮಾರ್ ಜಿಮ್ ಟ್ರೇನರ್ ಆಗಿದ್ದ. 10 ವರ್ಷಗಳ ಹಿಂದೆ ಕೆಲಸ ಹುಡುಕಿ ಬಿಹಾರದಿಂದ ಬೆಂಗಳೂರಿಗೆ ಬಂದಿದ್ದ. ವರ್ಷದ ಹಿಂದೆ ಯುವತಿಯನ್ನು ಪ್ರೀತಿಸಿ ಮನೆಯವರ ವಿರೋಧದ ನಡುವೆಯೂ ವಿವಾಹವಾಗಿದ್ದ.

ಪತ್ನಿ ನರ್ಸಿಂಗ್ ಕೋರ್ಸ್ ಗೆ ಸೇರಿದ್ದಳು. ಪತಿ-ಪತ್ನಿ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ ಮುನಿಸಿಕೊಂಡು ತವರಿಗೆ ಹೋಗಿದ್ದಳು. ಪತ್ನಿಯನ್ನು ಮನವೊಲಿಸಿ ವಾಪಾಸ್ ಕರೆತರಲು ಅಮಿತ್ ಕುಮಾರ್ ಸಾಕಷ್ಟು ಪ್ರಯತ್ನಿಸಿದ್ದಾನೆ. ಅದೇ ರೀತಿ ಪತ್ನಿಗೆ ವಿಡಿಯೋ ಕಾಲ್ ಮಾಡಿ ತಾನು ನೇಣು ಬಿಗಿದುಕೊಳ್ಳುತ್ತಿದ್ದೇನೆ ಎಂದು ಹೆದರಿಸಲು ಹೋಗಿದ್ದಾನೆ. ಈ ವೇಳೆ ಆಕಸ್ಮಿಕವಾಗಿ ಅಮಿತ್ ಕುಮಾರ್ ಕತ್ತಿಗೆ ನೇಣಿನ ಹಗ್ಗ ಬಿಗಿದಿದ್ದು, ಪತ್ನಿಯ ಜೊತೆ ವಿಡಿಯೋ ಕಾಲ್ ನಲ್ಲಿ ಇರುವಾಗಲೇ ಅಮಿತ್ ಕುಮಾರ್ ಸಾವನ್ನಪ್ಪಿದ್ದಾನೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read