ಅಸ್ಸಾಂನ ಪ್ರಸಿದ್ಧ ಮಹಿಳಾ ಯೂಟ್ಯೂಬರ್ ನಿಗೂಢ ರೀತಿಯಲ್ಲಿ ಸಾವು

ಅಸ್ಸಾಂನ ಪ್ರಸಿದ್ಧ ಮಹಿಳಾ ಯೂಟ್ಯೂಬರ್ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಗುವಾಹಟಿಯ ಬಾಮುನಿಮೈದಂ ಪ್ರದೇಶದ ಆಕೆಯ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದು ಈ ಪ್ರದೇಶದಲ್ಲಿ ಸಂಚಲನ ಮೂಡಿಸಿದೆ.

ಪ್ರಿಯೋಲಿನಾ ನಾಥ್ ಎಂದು ಗುರುತಿಸಲ್ಪಟ್ಟ ಯುವತಿಯು ಯೂಟ್ಯೂಬರ್ ಆಗಿದ್ದು, ಸಂಗಿ ವ್ಲಾಗ್ಸ್ ಎಂಬ ಚಾನಲ್ ಅನ್ನು ನಡೆಸುತ್ತಿದ್ದರು. ವರದಿಗಳ ಪ್ರಕಾರ ಆಕೆ ಇತ್ತೀಚೆಗೆ ಮದುವೆಯಾಗಿದ್ದರು.

ಇಂದು ಮುಂಜಾನೆ ಮಹಿಳೆಯ ದೇಹವು ಆಕೆಯ ನಿವಾಸದಲ್ಲಿ ಪತ್ತೆಯಾಗಿದೆ ಎಂದು ವರದಿಗಳು ತಿಳಿಸಿವೆ. ಆಕೆಯ ಕುತ್ತಿಗೆಗೆ ಹಗ್ಗ ಬಿಗಿದಂತಿದ್ದು ದೇಹದ ಮೇಲೆ ಹಲವಾರು ಗಾಯದ ಗುರುತುಗಳಿವೆ. ಇದು ಆತ್ಮಹತ್ಯೆಯೇ ಅಥವಾ ಕೊಲೆಯೇ ಎಂಬ ಅನುಮಾನವನ್ನು ಹುಟ್ಟುಹಾಕುತ್ತಿದೆ.

ಮೃತ ಯುವತಿ ಮೂರು ತಿಂಗಳ ಹಿಂದೆ ಮದುವೆಯಾಗಿದ್ದು ಅಸ್ಸಾಂನ ಸೋನಿತ್‌ಪುರ ಜಿಲ್ಲೆಯ ತಮ್ಮ ಪತಿ ಜಮುಗುರಿಹತ್ ನಿವಾಸಿ ಪಂಕಜ್ ನಾಥ್ ಅವರೊಂದಿಗೆ ಬಾಮುನಿಮೈದಮ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು ಎಂದು ವರದಿಗಳು ತಿಳಿಸಿವೆ.

ಪ್ರಿಯೋಲಿನಾ ಅವರನ್ನು ಕೊಲೆ ಮಾಡಲಾಗಿದೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ. ಚಂದಮಾರಿ ಪೊಲೀಸರು ಪ್ರಿಯೋಲಿನ ಪತಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read