“ತಾಯಿ, ಇದು ಆರೋಗ್ಯಕ್ಕೆ ಹಾನಿಕರ”: ಮಹಿಳೆಗೆ ಗುಟ್ಕಾ ತ್ಯಜಿಸುವಂತೆ ಪ್ರೇರೇಪಿಸಿದ ಸಚಿವ | Watch

ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಮಧ್ಯಪ್ರದೇಶದ ಶಿವಪುರಿಯಲ್ಲಿ ಗಮನಾರ್ಹ ಘಟನೆಯೊಂದರಲ್ಲಿ ಭಾಗಿಯಾಗಿದ್ದಾರೆ. ಗುಟ್ಕಾ ಜಗಿಯುತ್ತಿದ್ದ ಮಹಿಳೆಯನ್ನು ಕಂಡು ತಕ್ಷಣವೇ ಆಕೆಯ ಕೈಯಿಂದ ತಂಬಾಕು ಪಾಕೆಟ್ ಅನ್ನು ತೆಗೆದುಕೊಂಡು, ಅದರ ಹಾನಿಕಾರಕ ಪರಿಣಾಮಗಳ ಬಗ್ಗೆ ತಿಳಿಹೇಳಿ ಅದನ್ನು ತ್ಯಜಿಸುವಂತೆ ಸಲಹೆ ನೀಡಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಸಚಿವರ ಈ ಕಾಳಜಿಯನ್ನು ನೆಟ್ಟಿಗರು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.

ಸಚಿವ ಸಿಂಧಿಯಾ ಅವರು ಮಹಿಳೆಯನ್ನು ಪ್ರಶ್ನಿಸುತ್ತಾ, ಗುಟ್ಕಾ ಸೇವನೆಯಿಂದಾಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ವಿವರಿಸಿದರು. ಮಹಿಳೆ ಮುಗುಮ್ಮಾಗಿ ಉತ್ತರಿಸುತ್ತಿದ್ದರೂ, ಸಿಂಧಿಯಾ ಅವರು ವಿನಯದಿಂದ ಆಕೆಗೆ ಬುದ್ಧಿ ಹೇಳಿದರು. ನಂತರ ಆಕೆಯ ಕೈಯಲ್ಲಿದ್ದ ಗುಟ್ಕಾ ಪಾಕೆಟ್ ಅನ್ನು ತೆಗೆದುಕೊಂಡು ಅದನ್ನು ಎಸೆಯುವಂತೆ ತಮ್ಮ ಸಿಬ್ಬಂದಿಗೆ ಸೂಚಿಸಿದರು. ಅಲ್ಲದೆ, ಗುಟ್ಕಾ ಕಳೆದುಕೊಂಡ ದುಃಖದಲ್ಲಿದ್ದ ಮಹಿಳೆಯನ್ನು ಸಮಾಧಾನಪಡಿಸಿದರು.

ತಂಬಾಕು ಮತ್ತು ಇತರ ಹಾನಿಕಾರಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸುವ ಸಚಿವರ ಈ ನಡೆ ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಸಚಿವರ ಕಾಳಜಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read