ಅಹಮದಾಬಾದ್: ಗುಜರಾತ್ ನ ವಡೋದರಾ ಸೇತುವೆ ಕುಸಿತ ಪ್ರಕರಣದಲ್ಲಿ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗಿದ್ದು, 13 ಜನರು ಮೃತಪಟ್ಟಿದ್ದಾರೆ.
ಮಹಿಸಾಗರ ನದಿಗೆ ಕಟ್ಟಲಾಗಿದ್ದ ಸೇತುವೆ ವಾಹನಗಳು ಚಲಿಸುತ್ತಿದ್ದಗಲೇ ಬುಧವಾರ ಏಕಾಏಕಿ ಕುಸಿತಗೊಂಡು ವಾಹನಗಳ ಸಮೇತ ಜನರು ನದಿಗೆ ಬಿದ್ದಿದ್ದಾರೆ. ದುರಂತದಲ್ಲಿ ಸಾವಿನ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.
ಸೇತುವೆಯ 10-15 ಮೀಟರ್ ಉದ್ದ ಸ್ಲ್ಯಾಬ್ ಇದ್ದಕ್ಕಿದ್ದಂತೆ ಕುಸಿದು ಈ ದುರಂತ ಸಂಭವಿಸಿದೆ. ಎರಡು ಟ್ರಕ್, ಎರಡು ವ್ಯಾನ್, ಒಂದು ರಿಕ್ಷಾ, ಒಂದು ದ್ವಿಚಕ್ರವಾಹನಗಳು ನದಿಗೆ ಬಿದ್ದಿವೆ. ಘಟನೆಯಲ್ಲಿ ಗಾಯಗೊಂಡಿರುವ ಐಅರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದುರಂತ ನಡೆದ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
You Might Also Like
TAGGED:ವಡೋದರಾ ಸೇತುವೆ