ವಿವಾಹಿತನ ಜೊತೆ ಪರಾರಿಯಾಗಿದ್ದ ಯುವತಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಆಟೋದಲ್ಲಿ ಶವವಾಗಿ ಪತ್ತೆಯಾದ ಜೋಡಿ

ಗುಜರಾತಿನ ಜುನಾಗಢ ಜಿಲ್ಲೆಯಲ್ಲಿ ಯುವತಿ ನಾಪತ್ತೆಯಾಗಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಈ ಜೋಡಿ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿಯೇ ಆಟೋದಲ್ಲಿ ಶವವಾಗಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಈ ಜೋಡಿ ಬಿಂದೋರಾ ಗ್ರಾಮದಿಂದ ಡಿಸೆಂಬರ್ 31, 2022 ರಲ್ಲಿ ನಾಪತ್ತೆಯಾಗಿದ್ದು, ರಾಜೇಶ್ ಫರ್ಗಿ ಎಂಬಾತ ಈಗಾಗಲೇ ವಿವಾಹವಾಗಿದ್ದ. ಈತನೊಂದಿಗೆ ಶವವಾಗಿ ಪತ್ತೆಯಾಗಿರುವ ಯುವತಿ ಹೆಸರು ತಿಳಿದು ಬಂದಿಲ್ಲ.

ಇವರಿಬ್ಬರ ಮೃತ ದೇಹ ಶನಿವಾರದಂದು ಜುನಾಗಢ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಪತ್ತೆಯಾಗಿದ್ದು, ವಿಷದ ಬಾಟಲಿ ಸಹ ಸಿಕ್ಕಿದೆ. ಅಲ್ಲದೆ ಗ್ಯಾಸ್ ಸಿಲಿಂಡರ್, ಸ್ಟವ್, ಅಗತ್ಯ ಸಾಮಾಗ್ರಿಗಳು ಸಹ ಇದ್ದವು.

ಈ ಮೊದಲೇ ವಿವಾಹಿತನಾಗಿದ್ದ ರಾಜೇಶ್ ಯುವತಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದ್ದು, ಇವರಿಬ್ಬರ ಸಂಬಂಧಕ್ಕೆ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದ ಕಾರಣ ಊರು ಬಿಟ್ಟು ಪರಾರಿಯಾಗಿದ್ದರು. ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read