ಮನುಸ್ಮೃತಿ ಉಲ್ಲೇಖಿಸಿ ಅಪ್ರಾಪ್ತ ಅತ್ಯಾಚಾರ ಸಂತ್ರಸ್ತೆ ಗರ್ಭಪಾತಕ್ಕೆ ಅನುಮತಿ ನಿರಾಕರಿಸಿದ ಹೈಕೋರ್ಟ್

ಅಹಮದಾಬಾದ್: ಅತ್ಯಾಚಾರ ಸಂತ್ರಸ್ತೆ ಗರ್ಭಪಾತಕ್ಕೆ ಗುಜರಾತ್ ಹೈಕೋರ್ಟ್ ನ್ಯಾಯಪೀಠ ನಿರಾಕರಿಸಿದೆ. ಅಪ್ರಾಪ್ತ ಅತ್ಯಾಚಾರ ಸಂತ್ರತೆ 7 ತಿಂಗಳ ಗರ್ಭ ತೆಗೆಸಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಪೀಠ ಮನುಸ್ಮೃತಿ ಉಲ್ಲೇಖಿಸಿ ಅನುಮತಿ ನಿರಾಕರಿಸಿದೆ.

ಕೆಲವು ದಶಕಗಳ ಹಿಂದೆ ಹೆಣ್ಣುಮಕ್ಕಳು 14 -15 ವರ್ಷದ ವಯಸ್ಸಿನಲ್ಲಿ ಮದುವೆಯಾಗುತ್ತಿದ್ದು, 17 ವರ್ಷಕ್ಕೆ ತಾಯಿ ಆಗುತ್ತಿದ್ದರು. 17 ವರ್ಷಕ್ಕಿಂತ ಮೊದಲು ಮಗುವಿಗೆ ಜನ್ಮ ನೀಡುವುದು ಸಾಮಾನ್ಯವಾಗಿತ್ತು. ಹೆಣ್ಣುಮಗಳು ಮತ್ತು ಭ್ರೂಣ ಇಬ್ಬರು ಆರೋಗ್ಯವಾಗಿದ್ದಾಗ ಗರ್ಭಪಾತಕ್ಕೆ ಅನುಮತಿ ನೀಡುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.

21ನೇ ಶತಮಾನದಲ್ಲಿ ನಾವು ವಾಸಿಸುತ್ತಿದ್ದೇವೆ ನಿಮ್ಮ ಮುತ್ತಜ್ಜಿಯನ್ನು ಕೇಳಿ ನೋಡಿ. ಅವರಿಗೆ 14ರಿಂದ 15 ವರ್ಷದೊಳಗೆ ಮದುವೆಯಾಗಿ 17 ವರ್ಷಕ್ಕಿಂತ ಮೊದಲೇ ತಾಯಿಯಾಗುತ್ತಿದ್ದರು. ಇದನ್ನು ಅರಿಯಲು ನೀವು ಒಮ್ಮೆ ಮನುಸ್ಮೃತಿಯನ್ನು ಓದಿ ಎಂದು ನ್ಯಾಯ ಪೀಠ ಹೇಳಿದೆ.

ಮನುಸ್ಮೃತಿಯಲ್ಲಿ ಹಿಂದಿನ ಕಾಲದಲ್ಲಿನ ಸಾಮಾಜಿಕ ನಡವಳಿಕೆಯ ಕಾನೂನು ಮತ್ತು ಕೆಲವು ಆರೋಗ್ಯಕರ ನಿಯಮ ಉಲ್ಲೇಖಿಸಲಾಗಿದೆ ಎಂದು ಹೈಕೋರ್ಟ್ ತಿಳಿಸಿದೆ.

ಗುಜರಾತ್ ಹೈಕೋರ್ಟಿನ ನ್ಯಾಯಮೂರ್ತಿ ಸಮೀರ್ ದವೆ ಗುರುವಾರ ಪುರಾತನ ಸಂಸ್ಕೃತ ಕಾನೂನು ಪಠ್ಯ ಮನುಸ್ಮೃತಿಯನ್ನು ಉಲ್ಲೇಖಿಸಿ, ಹುಡುಗಿಯರು 14 ಅಥವಾ 15 ನೇ ವಯಸ್ಸಿನಲ್ಲಿ ಮದುವೆಯಾಗುತ್ತಾರೆ ಮತ್ತು ಆಗಾಗ್ಗೆ 17 ನೇ ವಯಸ್ಸಿಗೆ ಮಗುವಿಗೆ ಜನ್ಮ ನೀಡುತ್ತಾರೆ ಎಂಬ ಅವರ ವಾದವನ್ನು ಬೆಂಬಲಿಸಲು ಈ ಹೇಳಿಕೆಯನ್ನು ನೀಡಿದರು.

ಗರ್ಭಾವಸ್ಥೆಯ ಮುಕ್ತಾಯದ ಬಗ್ಗೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಅಪ್ರಾಪ್ತ ಬಾಲಕಿಯನ್ನು ಮೊದಲು ಪರೀಕ್ಷಿಸುವಂತೆ ನ್ಯಾಯಾಲಯವು ರಾಜ್‌ಕೋಟ್ ಸಿವಿಲ್ ಆಸ್ಪತ್ರೆಗೆ ನಿರ್ದೇಶಿಸಿದೆ. ಆಸ್ಪತ್ರೆಯ ವೈದ್ಯರ ಸಮಿತಿಯ ವರದಿಯ ನಂತರ ವೈದ್ಯಕೀಯ ಮುಕ್ತಾಯವನ್ನು ಅನುಮತಿಸಬೇಕೆ ಎಂದು ನ್ಯಾಯಾಲಯ ನಿರ್ಧರಿಸುತ್ತದೆ. ಮುಂದಿನ ವಿಚಾರಣೆ ಜೂನ್ 15 ರಂದು ನಡೆಯಲಿದೆ.

ಭ್ರೂಣ ತೆಗೆದು ಹಾಕುವ ಪ್ರಕ್ರಿಯೆಯಲ್ಲಿ ಮಗು ಜೀವಂತವಾಗಿ ಜನಿಸುವ ಸಾಧ್ಯತೆ ಇದ್ದು, ಒಂದು ವೇಳೆ ಹಾಗೆ ಆದಲ್ಲಿ ಮಗುವನ್ನು ಯಾರು ನೋಡಿಕೊಳ್ಳುತ್ತಾರೆ ಎಂದು ಪ್ರಶ್ನಿಸಿದ ನ್ಯಾಯಪೀಠ, ಸಮಾಜ ಕಲ್ಯಾಣ ಇಲಾಖೆಯನ್ನು ಸಂಪರ್ಕಿಸುವಂತೆ ಅರ್ಜಿದಾರರ ಪರ ಕಾಳಜಿ ತೋರಿದೆ. ಈ ಮೂಲಕ ಗರ್ಭಪಾತಕ್ಕೆ ಅನುಮತಿ ಕೋರಿದ ಅರ್ಜಿಯನ್ನು ತಿರಸ್ಕರಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read