ಗುಜರಾತ್ ಗೇಮ್ ಝೋನ್ ಅಗ್ನಿ ದುರಂತದ ಕರುಣಾಜನಕ ಕಥೆಗಳು; 10 ದಿನಗಳ ಹಿಂದೆ ವಿವಾಹವಾಗಿದ್ದ ನವದಂಪತಿ, ಒಂದೇ ಕುಟುಂಬದ ಐವರು ಸಜೀವದಹನ

ಅಹಮದಾಬಾದ್: ಗುಜರಾತ್ ನ ರಾಜ್ ಕೋಟ್ ಬಳಿ ಗೇಮಿಂಗ್ ಝೋನ್ ನಲ್ಲಿ ಸಂಭವಿಸಿದ್ದ ಅಗ್ನಿ ದುರಂತದಲ್ಲಿ 9 ಮಕ್ಕಳು ಸೇರಿ 35 ಜನರು ಮೃತಪಟ್ಟಿದ್ದಾರೆ. ಅಗ್ನಿ ದುರಂತಕ್ಕೀಡಾದವರದ್ದು ಒಬ್ಬೊಬ್ಬರದ್ದು ಒಂದೊಂದು ಕರುಣಾಜನಕ ಕಥೆ.

ಗೇಮಿಂಗ್ ಝೋನ್ ಬೆಂಕಿ ಅವಘಡದಲ್ಲಿ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೇ 10 ದಿನಗಳ ಹಿಂದಷ್ಟೇ ವಿವಾಹವಾಗಿದ್ದ ನವದಂಪತಿ ಬೆಂಕಿ ದುರಂತದಲ್ಲಿ ಸುಟ್ಟುಕರಕಲಾಗಿದ್ದಾರೆ.

ಅಕ್ಷಯ್ ಧೋಲಾರಿಯಾ ಹಾಗೂ ಖ್ಯಾತಿ ಖ್ವಾಲಿವೇಯಾ ಎಂಬ ನವಜೋಡಿ ಭೀಕರ ಅಗ್ನಿ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಇನ್ನು ಗೇಮಿಂಗ್ ಝೋನ್ ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಹೈಕೋರ್ಟ್ ಸುಮೋಟೊ ಕೇಸ್ ದಾಖಲಿಸಿಕೊಂಡಿದ್ದು, ಇಂದು ವಿಚಾರಣೆ ನಡೆಸಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read