ಚಿಕ್ಕೋಡಿ: ಎರಡು ಪುಟಗಳ ಡೆತ್ ನೋಟ್ ಬರೆದು ವಾಟ್ಸಾಪ್ ಗ್ರೂಪ್ ನಲ್ಲಿ ಹಾಕಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಅತಿಥಿ ಉಪನ್ಯಾಸಕ ನಾಪತ್ತೆಯಾಗಿದ್ದಾರೆ.
ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಇತ್ತೀಚೆಗೆ ಪ್ರಕರಣ ದಾಖಲಾಗಿದೆ. ಡಾ. ನೇಮಿನಾಥ ಬಸವಣ್ಣಿ ತೆಪಕೇರಿ ನಾಪತ್ತೆಯಾದ ಅತಿಥಿ ಉಪನ್ಯಾಸಕ. ನಿಪ್ಪಾಣಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಾ. ನೇಮಿನಾಥ್ ಅತಿಥಿ ಉಪನ್ಯಾಸಕರಾಗಿದ್ದು, ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ,
ನಾನು ಆತ್ಮ ಬಲಿದಾನಕ್ಕೆ ಸಿದ್ಧವಾಗಿದ್ದೇನೆ, ನನ್ನ ಸಾವಿಗೆ ಮುಖ್ಯಮಂತ್ರಿಗಳು, ಉನ್ನತ ಶಿಕ್ಷಣ ಸಚಿವರು ಹೊಣೆಗಾರರು ಎಂದು ಬರೆದಿದ್ದಾರೆ. ಬಂಧು ಮಿತ್ರರಿಗೆ ಜಯವಾಗಲಿ. ಕ್ಷಮೆ ಇರಲಿ ಮುದ್ದು ಮಗಳೇ, ಅಮ್ಮನ ಜೊತೆ ಖುಷಿಯಾಗಿರು, ನಿಮ್ಮಪ್ಪ ಮತ್ತೆ ಹುಟ್ಟಿ ಬರುತ್ತಾನೆ ಎಂದು ರಾಜ್ಯಮಟ್ಟದ ಅತಿಥಿ ಉಪನ್ಯಾಸಕರ ವಾಟ್ಸಾಪ್ ಗ್ರೂಪ್ ನಲ್ಲಿ ಸೆ. 29ರಂದು ಪತ್ರ ಬರೆದು ಹಾಕಿ ನಾಪತ್ತೆಯಾಗಿದ್ದಾರೆ. ಸೆ. 30ರಂದು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.