BIG NEWS: ರಾಜ್ಯದ 10809 ಕೋಟಿ ರೂ. ಸೇರಿ 1.49 ಲಕ್ಷ ಕೋಟಿ ರೂ. GST ಸಂಗ್ರಹ: ಶೇ. 12 ರಷ್ಟು ಏರಿಕೆ

ನವದೆಹಲಿ: ಫೆಬ್ರವರಿಯಲ್ಲಿ ಜಿಎಸ್‌ಟಿ ಸಂಗ್ರಹದಲ್ಲಿ ಶೇಕಡ 12ರಷ್ಟು ಏರಿಕೆಯಾಗಿದೆ. ಫೆಬ್ರವರಿ ತಿಂಗಳಲ್ಲಿ 1.49 ಲಕ್ಷ ಕೋಟಿ ರೂಪಾಯಿ ಜಿಎಸ್​ಟಿ ಸಂಗ್ರಹಿಸಲಾಗಿದೆ.

ಕರ್ನಾಟಕದಲ್ಲಿ 10,809 ಕೋಟಿ ರೂಪಾಯಿ ಜಿಎಸ್‌ಟಿ ಸಂಗ್ರಹವಾಗಿದ್ದು, ಮಹಾರಾಷ್ಟ್ರ ನಂತರ ಕರ್ನಾಟಕದಲ್ಲಿ ಹೆಚ್ಚಿನ ಪ್ರಮಾಣದ ಜಿಎಸ್‌ಟಿ ಸಂಗ್ರಹವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯದಿಂದ ಮಾಹಿತಿ ನೀಡಲಾಗಿದೆ

ದೇಶೀಯ ಆರ್ಥಿಕ ಚಟುವಟಿಕೆಗಳು ಮತ್ತು ಉನ್ನತ ಮಟ್ಟದ ಸರಕುಗಳ ಮೇಲಿನ ಗ್ರಾಹಕ ವೆಚ್ಚವು ವೇಗವನ್ನು ಪಡೆದುಕೊಂಡಿದ್ದರಿಂದ ಫೆಬ್ರವರಿಯಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಸಂಗ್ರಹವು ಶೇಕಡ 12 ರಷ್ಟು ಏರಿಕೆಯಾಗಿ 1.49 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ. ಆದಾಗ್ಯೂ, ಜನವರಿ 1.58 ಲಕ್ಷ ಕೋಟಿ ರೂ.ಗಿಂತ ಇದು ಕಡಿಮೆಯಾಗಿದೆ, ಇದು ಜುಲೈ 1, 2017 ರಂದು GST ಜಾರಿಯಾದ ನಂತರ ಎರಡನೇ ಅತಿ ಹೆಚ್ಚು ಮಾಸಿಕ ಆದಾಯದ ಅಂಕಿ ಅಂಶವಾಗಿದೆ.

ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಒಟ್ಟು ಜಿಎಸ್‌ಟಿ ಆದಾಯದಲ್ಲಿ ಕೇಂದ್ರ ಜಿಎಸ್‌ಟಿ 27,662 ಕೋಟಿ ರೂ., ರಾಜ್ಯ ಜಿಎಸ್‌ಟಿ 34,915 ಕೋಟಿ ರೂ., ಸಮಗ್ರ ಜಿಎಸ್‌ಟಿ 75,069 ಕೋಟಿ ರೂ.(ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 35,689 ಕೋಟಿ ರೂ. ಸೇರಿದಂತೆ) ಮತ್ತು ಸೆಸ್ 11,931 ಕೋಟಿ ರೂ.(ಸರಕುಗಳ ಆಮದು ಮೇಲೆ ಸಂಗ್ರಹಿಸಿದ 792 ಕೋಟಿ ರೂ.ಸೇರಿದಂತೆ). 11,931 ಕೋಟಿ ರೂ.ಗಳ ಸೆಸ್ ಸಂಗ್ರಹವು ಜಿಎಸ್‌ಟಿ ಜಾರಿಯಾದ ನಂತರ ಅತಿ ಹೆಚ್ಚು ಸಂಗ್ರಹ ಫೆಬ್ರವರಿ ತಿಂಗಳಲ್ಲಿ ಆಗಿದೆ. ಫೆಬ್ರವರಿ ಸೇರಿದಂತೆ ಸತತ 12 ತಿಂಗಳ ಕಾಲ ಮಾಸಿಕ ಜಿಎಸ್‌ಟಿ ಆದಾಯ 1.4 ಲಕ್ಷ ಕೋಟಿ ರೂ.ಗಿಂತಲೂ ಹೆಚ್ಚು ಸಂಗ್ರಹವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read