BIG NEWS: ಜುಲೈನಲ್ಲಿ 1.82 ಲಕ್ಷ ಕೋಟಿ ರೂ. GST ಸಂಗ್ರಹ: 10.3% ರಷ್ಟು ಏರಿಕೆ: ಕರ್ನಾಟಕಕ್ಕೆ 2ನೇ ಸ್ಥಾನ

ನವದೆಹಲಿ: ಜುಲೈ 2024 ರಲ್ಲಿ GST ಸಂಗ್ರಹ 10.3% ರಷ್ಟು ಏರಿಕೆಯಾಗಿದ್ದು, 1.82 ಲಕ್ಷ ಕೋಟಿ ರೂ. ಕಲೆಕ್ಷನ್ ಆಗಿದೆ

ಗುರುವಾರ ಬಿಡುಗಡೆಯಾದ ಇತ್ತೀಚಿನ ಅಧಿಕೃತ ಮಾಹಿತಿಯ ಪ್ರಕಾರ ಜುಲೈ 2024 ರಲ್ಲಿ ಒಟ್ಟು ಜಿಎಸ್‌ಟಿ ಸಂಗ್ರಹವು ಶೇಕಡ 10.3 ರಷ್ಟು ಏರಿಕೆಯಾಗಿ 1,82,075 ಕೋಟಿ ರೂಪಾಯಿಗಳಿಗೆ ತಲುಪಿದೆ.

ಮರುಪಾವತಿಯನ್ನು ಲೆಕ್ಕಹಾಕಿದ ನಂತರ, ಜುಲೈ 2024 ರ ನಿವ್ವಳ GST ಆದಾಯವು 1,44,897 ಕೋಟಿ ರೂ.ಗಳಷ್ಟಿದೆ, ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 14.4 ಶೇಕಡ ಬೆಳವಣಿಗೆ ದಾಖಲಿಸಿದೆ.

ರಾಜ್ಯವಾರು ಮಹಾರಾಷ್ಟ್ರವು ಅತಿ ಹೆಚ್ಚು ಜಿಎಸ್‌ಟಿ 28,970 ಕೋಟಿ ರೂ. ಸಂಗ್ರಹಿಸಿದೆ, ನಂತರ ಕರ್ನಾಟಕ (13,025 ಕೋಟಿ ರೂ.), ಗುಜರಾತ್ (11,015 ಕೋಟಿ ರೂ.), ತಮಿಳುನಾಡು( 10,490 ಕೋಟಿ ರೂ.), ಮತ್ತು ಉತ್ತರ ಪ್ರದೇಶ(9,125 ಕೋಟಿ ರೂ.) ಅಧಿಕೃತ ಮಾಹಿತಿಯ ಪ್ರಕಾರ. ಈ ಸಂಗ್ರಹದ ಅಂಕಿಅಂಶಗಳು ಸರಕುಗಳ ಆಮದು ಮೇಲಿನ ಜಿಎಸ್‌ಟಿಯನ್ನು ಒಳಗೊಂಡಿಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read