ಮೈಸೂರು: ಗೃಹಲಕ್ಷ್ಮಿ ಯೋಜನೆ ವಿಚಾರವಾಗಿ ಮಾತನಾಡಿರುವ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಹೆಚ್.ಎಂ.ರೇವಣ್ಣ, ಪ್ರತಿ ತಿಂಗಳು ಹಣ ಕೊಡಲು ತೊಡಕುಗಳಿವೆ ಎಂದಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಎಂ.ರೇವಣ್ಣ, ಗೃಹಲಕ್ಷ್ಮಿ ಯೋಜನೆಯಲ್ಲಿ ಮೂರು ತಿಂಗಳಿಗೊಮ್ಮೆ ಹಣ ನೀಡುತ್ತಿದ್ದೇವೆ. ಪ್ರತಿ ತಿಂಗಳು ಹಣ ನೀಡಲು ತೊಡಕುಗಳಿವೆ ಎಂದು ತಿಳಿಸಿದರು.
ಜಿಎಸ್ ಟಿ ವಿಚಾರದಲ್ಲಿ 1 ಲಕ್ಷ 20 ಸಾವಿರ ಜನರಿಗೆ ಹಣ ಹೋಗಿರಲಿಲ್ಲ. ಅದರಲ್ಲಿ 58 ಸಾವಿರ ಜನರ ಸಮಸ್ಯೆಗಳನ್ನು ಬಗೆಹರಿಸಿದ್ದೇವೆ. ಉಳಿದವರ ಸನಸ್ಯೆ ಶೀಘ್ರ ಬಗೆಹರಿಸಲಾಗುವುದು ಎಂದರು.
ನಾವು ಗೃಹಲಕ್ಷ್ಮಿ ಹಣ ನಿಲ್ಲಿಸಿಲ್ಲ. ಆದರೆ ಪ್ರತಿ ತಿಂಗಳು ಹಣ ಕೊಡಲಿ ಕೆಲ ತೊಡಕುಗಳಿವೆ ಹಾಗಾಗಿ ಕೊಡಲು ಆಗುತ್ತಿಲ್ಲ ಎಂದು ತಿಳಿಸಿದರು.
ಇನ್ನು ಸಿಎಂ ಬದಲಾವಣೆ ವಿಚಾರ ಹೈಕಮಾಂಡ್ ಮಟ್ಟದಲ್ಲಿ ಚರ್ಚೆಯಾಗಿಲ್ಲ. ಕೆಲ ಗೊಂದಲಗಳಿದ್ದವು. ಆದರೆ ಹೈಕಮಾಂಡ್ ಈಗ ಎಲ್ಲವನ್ನೂ ಬಗೆಹರಿಸಿದೆ ಎಂದು ತಿಳಿಸಿದರು.
You Might Also Like
TAGGED:ಗೃಹಲಕ್ಷ್ಮಿ ಯೋಜನೆ