Gruha Lakshmi Scheme : `ಮೆಸೇಜ್’ ಬಂದಿದ್ರೂ ಗೃಹಲಕ್ಷ್ಮಿ ಹಣ ಖಾತೆಗೆ ಜಮಾ ಆಗಿಲ್ವಾ? ಇದೇ ಕಾರಣ!

ಬೆಂಗಳೂರು : ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯಡಿ ಪಡಿತರ ಚೀಟಿ ಹೊಂದಿದ ‘ಕುಟುಂಬದ ಯಜಮಾನಿ’ ಎಂದು ಗುರುತಿಸಲ್ಪಟ್ಟ ಮಹಿಳೆಯರಿಗೆ ಆಧಾರ್ ಜೋಡಣೆಯಾಗಿರುವ ಬ್ಯಾಂಕ್ ಖಾತೆಗೆ ಆಗಸ್ಟ್ – 2023 ರಿಂದ ಮಾಹೆಯಾನ ರೂ.2000/- ಗಳನ್ನು ಡಿಬಿಟಿ ಮೂಲಕ ಹಣ ಜಮೆ ಮಾಡಲಾಗುತ್ತಿದೆ. ಈಗಾಗಲೇ ಅರ್ಹ ಫಲಾನುಭವಿಗಳಿಗೆ 2 ಕಂತಿನ ಹಣ ಬಿಡುಗಡೆಯಾಗಿದೆ.

ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಮೆಸೇಜ್ ಬಂದಿದ್ದರೂ ಸಹ ಅವರ ಖಾತೆಗೆ ಹಣ ಜಮಾ ಆಗಿಲ್ಲ. ಅನೇಕ ಮಹಿಳೆಯರಿಗೆ ಎಸ್ಎಂಎಸ್ ಬಂದ್ರೂ ಸಹ ಖಾತೆಗೆ ಹಣ ಜಮಾ ಆಗದಿರುವುದು ಕಂಡು ಬಂದಿದೆ. ಹೀಗಾಗಿ ಮಹಿಳೆಯರು ತಮ್ಮ ಬ್ಯಾಂಕ್ ಖಾತೆಗಳನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಇಲಾಖೆ ಸೂಚನೆ ನೀಡಿದೆ.

ಇವರಿಗೆ 2,000 ರೂ.ಹಣ ಜಮಾ ಆಗಿಲ್ಲ

ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಯನ್ನು  ಹೊಂದಿದ್ದಾರೋ ಅಂತವರ ಖಾತೆಗೆ 2 ಸಾವಿರ ರೂ.ಜಮಾ ಆಗಿಲ್ಲ, ಅಷ್ಟೇ ಅಲ್ಲದೆ ಬ್ಯಾಂಕ್ ಖಾತೆ ಆಕ್ಟಿವ್ ಆಗಿಲ್ಲದೆ ಇರುವವರಿಗೂ ಕೂಡ ಹಣ ಜಮಾ ಆಗಿಲ್ಲ. ಬ್ಯಾಂಕ್ ಖಾತೆ ಇದ್ದರೂ ಅದಕ್ಕೆ ಆಧಾರ್ ಕಾರ್ಡ್ ಲಿಂಕ್ ಮಾಡಿಸದೇ ಇರುವವರಿಗೆ. ಆಧಾರ್ ಕಾರ್ಡ್ ಹಾಗೂ ಪಡಿತರ ಚೀಟಿಯ ಅಪ್ ಡೇಟ್ ಮಾಡದವರಿಗೂ ಗೃಹಲಕ್ಷ್ಮಿ ಹಣ ಜಮೆ ಆಗಿಲ್ಲ.

ಅರ್ಜಿ ಸಲ್ಲಿಸಿದ ಫಲಾನುಭವಿಗಳ ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ಜೋಡಣೆಯಾಗದೇ ಇ-ಕೆವೈಸಿ ಅಪ್ಡೇಟ್ ಆಗದೇ ಇರುವುದರಿಂದ ಹಣ ಜಮೆಯಾಗದೇ ಇರುವವರು ತಮ್ಮ ಖಾತೆ ಹೊಂದಿರುವ ಬ್ಯಾಂಕ್ಗಳಿಗೆ ಸಂಪರ್ಕಿಸಿ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ನೀಡಿ ಆಧಾರ್ ಜೋಡಣೆ ಮತ್ತು ಇಕೆವೈಸಿ ಅಪ್ಡೇಟ್ ಮಾಡಿಸಿಕೊಳ್ಳುವುದು ಹಾಗೂ ಫಲಾನುಭವಿಗಳು ಆಧಾರ್ ಕಾರ್ಡ್, ಪಡಿತರ ಚೀಟಿಯನ್ವಯ ಹಾಗೂ ಪಾಸ್ಪುಸ್ತಕದಲ್ಲಿರುವ ಖಾತೆದಾರರ ಹೆಸರು ಹೊಂದಾಣಿಕೆ ಮಾಡಿಸಿಕೊಳ್ಳುವಂತೆ ಯೋಜನೆಯ ಸೌಲಭ್ಯವನ್ನು ಪಡೆಯುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಪ್ರಕಟಣೆ ಹೊರಡಿಸಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read