ಮದುವೆ ಸಮಾರಂಭಗಳಲ್ಲಿ ಕುಣಿತಗಳು ಸಾಮಾನ್ಯ. ಆದರೆ ಈ ವಿಡಿಯೋದಲ್ಲಿನ ವರನ ಕುಣಿತ ಎಲ್ಲರ ಗಮನ ಸೆಳೆದಿದೆ. ವರನ ಅಬ್ಬರದ ಕುಣಿತ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ವರ ಮೆರವಣಿಗೆಯಲ್ಲಿ ಕುಣಿಯಲು ಪ್ರಾರಂಭಿಸುತ್ತಾನೆ. “ಮೈ ಪ್ರೇಮ್ ಕಿ ದಿವಾನಿ ಹೂ” ಸಿನಿಮಾದ ಹಾಡಿಗೆ ತಕ್ಕಂತೆ ಕುಣಿಯುತ್ತಾನೆ. ರಸ್ತೆಯಲ್ಲೇ ಕುಣಿದು ಕುಣಿದು ನಂತರ ಮಂಟಪದಲ್ಲಿಯೂ ತನ್ನ ಕುಣಿತವನ್ನು ಮುಂದುವರೆಸುತ್ತಾನೆ. ವಧುವಿನ ಜೊತೆಯೂ ಕುಣಿಯುತ್ತಾನೆ. ಕುಣಿತದ ಭರಾಟೆಯಲ್ಲಿ ಬಳಲಿ ಸುಸ್ತಾದ ವರ, ಕೊನೆಗೆ ವಧುವಿನ ತೊಡೆಯ ಮೇಲೆ ತಲೆ ಇಟ್ಟು ವಿಶ್ರಾಂತಿ ಪಡೆಯುತ್ತಾನೆ.
ಈ ವಿಡಿಯೋವನ್ನು rakesh.bhatiya.3154 ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಲಕ್ಷಾಂತರ ಜನರು ಈ ವಿಡಿಯೋವನ್ನು ನೋಡಿದ್ದಾರೆ. ಕಾಮೆಂಟ್‌ಗಳನ್ನು ಆಫ್ ಮಾಡಲಾಗಿದ್ದರೂ, ವೀಕ್ಷಕರು ಇದನ್ನು ಮೆಚ್ಚಿಕೊಂಡಿದ್ದಾರೆ.