600 ಜನರ ಊಟದ ಬಿಲ್ ಕಟ್ಟಲು ಒಪ್ಪದ ವಧು ಕಡೆಯವರು, ಮದುವೆ ಕ್ಯಾನ್ಸಲ್ ಮಾಡಿದ ವರ….!

ಸಣ್ಣ ಪಟ್ಟಣವೊಂದರಲ್ಲಿ ನಡೆದ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಸಂಬಂಧಿಕರ ಮೂಲಕ ಪರಿಚಯವಾದ ಯುವಕನೊಂದಿಗೆ ಮದುವೆ ನಿಶ್ಚಯವಾಗಿದ್ದ ಯುವತಿಯ ವಿವಾಹವು ಕೊನೆಯ ಕ್ಷಣದಲ್ಲಿ ರದ್ದಾಗಿದೆ. ಇದಕ್ಕೆ ಕಾರಣ ವರನ ಕಡೆಯವರು ವಿಧಿಸಿದ ವಿಚಿತ್ರ ಬೇಡಿಕೆ!

ಸಾಮಾನ್ಯವಾಗಿ ತಮ್ಮೂರಿನಲ್ಲಿ ಅದ್ದೂರಿ ಮದುವೆ (₹10-15 ಲಕ್ಷಕ್ಕೂ ಹೆಚ್ಚು ಖರ್ಚು) ಅಥವಾ ಸರಳವಾದ ಟೀ ಪಾರ್ಟಿಯಂತಹ ವಿವಾಹಗಳು ನಡೆಯುತ್ತವೆ ಎಂದು ವಧುವಿನ ಸಹೋದರ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ. ಆರಂಭದಲ್ಲಿ ಎರಡೂ ಕುಟುಂಬಗಳು ತಮ್ಮ ಅತಿಥಿಗಳ ಊಟದ ಖರ್ಚನ್ನು ಹಂಚಿಕೊಳ್ಳಲು ಒಪ್ಪಿಕೊಂಡಿದ್ದವು. ಆರ್ಥಿಕವಾಗಿ ಸಮಾನವಾಗಿದ್ದರೂ, ಇದ್ದಕ್ಕಿದ್ದಂತೆ ವರನ ಕಡೆಯವರು ತಮ್ಮ 600 ಅತಿಥಿಗಳ ಊಟದ ಸಂಪೂರ್ಣ ಖರ್ಚನ್ನು ವಧುವಿನ ಮನೆಯವರೇ ಭರಿಸಬೇಕೆಂದು ಒತ್ತಾಯಿಸಿದ್ದಾರೆ.

“ನಾವು ಅಷ್ಟೊಂದು ಶ್ರೀಮಂತರಲ್ಲ, ಹೀಗಾಗಿ ಅಷ್ಟು ಹಣ ಖರ್ಚು ಮಾಡಲು ಸಾಧ್ಯವಿಲ್ಲ ಎಂದು ನಾವು ವರನ ಕಡೆಯವರಿಗೆ ತಿಳಿಸಿದ್ದೆವು. ಮೇ ತಿಂಗಳಲ್ಲಿ ಮದುವೆ ನಿಗದಿಯಾಗಿತ್ತು. ಆದರೆ ಈಗ ಇದೇ ಕಾರಣಕ್ಕೆ ಅವರು ಮದುವೆಯನ್ನು ರದ್ದುಗೊಳಿಸಿದ್ದಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅವರ ಆಡಂಬರವನ್ನು ಪೂರೈಸಲು ಸಾಧ್ಯವಿಲ್ಲ ಎಂದು ತಿಳಿದಿದ್ದರಿಂದ ಅವರು ಮದುವೆಯನ್ನು ಮುರಿದಿದ್ದಾರೆ. ನನ್ನ ತಾಯಿ ಮತ್ತು ಸಹೋದರಿ ಅಳುತ್ತಿದ್ದಾರೆ. ನಮ್ಮ ಕುಟುಂಬವು ಕಾನೂನು ಕ್ರಮಕ್ಕೆ ಹೆದರುತ್ತಿದೆ, ಏಕೆಂದರೆ ಅದು ನನ್ನ ಸಹೋದರಿಯ ಗೌರವಕ್ಕೆ ಧಕ್ಕೆ ತರಬಹುದು. ನಾವು ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ” ಎಂದು ಅವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ವರನು ಕರೆ ಮಾಡಿ, ತಾನು 600 ಜನರನ್ನು ಆಹ್ವಾನಿಸಲು ಯೋಜಿಸಿದ್ದು, ಅವರ ಊಟದ ಖರ್ಚನ್ನು ವಧುವಿನ ಕಡೆಯವರು ಭರಿಸಲು ನಿರಾಕರಿಸಿದ್ದರಿಂದ ಮದುವೆಯನ್ನು ರದ್ದುಗೊಳಿಸುತ್ತಿರುವುದಾಗಿ ತಿಳಿಸಿದ್ದಾನೆ ಎಂದು ವಧುವಿನ ಸಹೋದರ ಹೇಳಿದ್ದಾರೆ.

ಈ ಪೋಸ್ಟ್‌ಗೆ ಅನೇಕ ಕಾಮೆಂಟ್‌ಗಳು ಬಂದಿದ್ದು, ವಧುವಿನ ಕುಟುಂಬಕ್ಕೆ ಬೆಂಬಲ ಸೂಚಿಸಿವೆ. “ಒಂದು ಮುರಿದ ನಿಶ್ಚಿತಾರ್ಥವು ಕಹಿ ವಿಚ್ಛೇದನಕ್ಕಿಂತ ಎಷ್ಟೋ ಉತ್ತಮ. ಮನೆಯಲ್ಲಿ ಒಂದು ಸಣ್ಣ ಪಾರ್ಟಿ ಮಾಡಿ ಈ ಗೊಂದಲದಿಂದ ಹೊರಬನ್ನಿ” ಎಂದು ಅನೇಕರು ಸಲಹೆ ನೀಡಿದ್ದಾರೆ.

ಮತ್ತೊಬ್ಬ ಬಳಕೆದಾರರು, ಇದು ಆಘಾತಕಾರಿ ವಿಷಯವಾಗಿದ್ದರೂ, ಮದುವೆಯನ್ನು ರದ್ದುಗೊಳಿಸುವುದರಿಂದ ಯಾವುದೇ ಕಾನೂನು ಉಲ್ಲಂಘನೆಯಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. “ಯಾವುದೇ ಅಪರಾಧವಿಲ್ಲ. ಮದುವೆಯ ಸಮಾರಂಭದ ಪ್ರಕಾರ ಮತ್ತು ಖರ್ಚಿನ ಬಗ್ಗೆ ಭಿನ್ನಾಭಿಪ್ರಾಯವಿತ್ತು. ಇದು ವರದಕ್ಷಿಣೆ ನಿಷೇಧ ಕಾಯ್ದೆ, 1861 ರ ಪ್ರಕಾರ ವರದಕ್ಷಿಣೆಯ ವ್ಯಾಖ್ಯಾನದ ಅಡಿಯಲ್ಲಿ ಬರುವುದಿಲ್ಲ” ಎಂದು ಅವರು ಹೇಳಿದ್ದಾರೆ.

“ನಿಮ್ಮ ಕುಟುಂಬವು ಕೇವಲ ಗುಂಡೇಟಿನಿಂದ ತಪ್ಪಿಸಿಕೊಂಡಿಲ್ಲ, ಬದಲಾಗಿ ಒಂದು ದೊಡ್ಡ ಅಪಾಯದಿಂದ ಪಾರಾಗಿದೆ” ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read